
ಮುಸ್ಸಂಜೆಯ ಕೆಂಪು ಮುಗಿಲಲಿ ಜಗವಾಳುವ ಸೂರ್ಯ ಮರೆಯಾದಂತೆ,
ಹುಚ್ಚು ಮನಸಿನ ನಿನ್ನ ಭಾವನೆಗಳಲಿ ಜಗಗೆಲ್ಲುವ ಪ್ರೀತಿಯದು ಬೆಚ್ಚಿ ಕುಳಿತಿದೆ
ನನಗೋ ಪ್ರೀತಿಯದು ಅಚ್ಚುಮೆಚ್ಚು…
ನಿನಗೋ ಮನದೊಳಗೆ ಉರಿವ ಕಿಚ್ಚು…
ನಿನಗಾಗಿ ಹೃದಯದ ಬಾಗಿಲಲಿ ಇಣುಕಿಣುಕಿ,
ನೋಡುತ್ತಾ ಕಾದು ಕುಳಿತಿದ್ದ ಪ್ರೀತಿಗೀಗ ದಣಿವಾಗಿದೆ…
ನನ್ನ ಹೃದಯದ ಹೊಸ್ತಿಲ ದಾಟಿ ಯಾವಾಗಲೋ ಓಡಿ ಹೋದ-
ನಿನ್ನ ಪ್ರೀತಿಯದು ಕೃಶವಾಗಿದೆ..
ನಿನ್ನ ಕೃಶವಾದ ಪ್ರೀತಿಯ ವಿಷವ ಬಸಿದು,
ನನ್ನ ದಣಿದ ಹೃದಯಕೆ ಚೈತನ್ಯ ಕೊಟ್ಟೇನು…
ಬಂದುಬಿಡು, ಬಂದು ನನ್ನೊಮ್ಮೆ ಸೇರಿಬಿಡು…
ಸೇರಿ ನನ್ನ ಪ್ರೀತಿಯೊಡನೆ ಬೆರೆತುಬಿಡು…