
ಅದು ಗೋಪಾಲನ್ ಮಾಲ್. ಬೆಂಗಳೂರಿನ ಅದ್ರಲ್ಲೂ ಮೈಸೂರ್ ರೋಡಿನ ಜನಗಳ ಪಾಲಿಗೆ ಶಾಪಿಂಗ್ ಅಡ್ಡ. ನನ್ನ ಮನೆಗೂ ಅದು ಹತ್ರ ಅನ್ನೋ ಕಾರಣಕ್ಕೆ ನಂಗೂ ಅದು ಇಷ್ಟ. ಸಾಮಾನ್ಯವಾಗಿ ನನ್ನ ಫ್ರೀ ಟೈಮ್ ನಲ್ಲಿ ಅಲ್ಲೇ ಸಾಯ್ತಾ ಇರ್ತೀನಿ. ಹಾಗೆ ಕಳೆದ ಭಾನುವಾರಾನೂ ನಾನಲ್ಲಿಗೆ ಹೋಗಿದ್ದೆ. ಸಹಜವಾಗಿ ವಯಸಿನ ಹುಡುಗನ ಕಣ್ಣುಗಳು ಅತ್ತಿಂದಿತ್ತ ಹುಡುಗಿಯರನ್ನೇ ಹುಡುಕ್ತಾ ಇದ್ವು. ಅಲ್ಯಾರೋ ಕೂಡಿ ಹಾಕಿದವಳು, ಇಲ್ಯಾವ್ದೋ ಪ್ಯಾಂಟ್ ಟಿ- ಶರ್ಟ್ ಹಾಕಿ ಮಿಂಚ್ತಾ ಇದ್ದಾಕೆ. ಅಲ್ಯಾವ್ದೋ ಮಿಡಿ ಮಿನಿ.. ಕಣ್ಣುಗಳು ಬೆಳಕಿಗಿಂತಾ ವೇಗವಾಗಿ ಎಲ್ಲರನ್ನೂ ಸೆರೆ ಹಿಡೀತಾ ಇತ್ತು. ನನ್ನ ಕಣ್ಣುಗಳು ಹುಡುಗಿಯರನ್ನ ನೋಡುವ ವಿಚಾರ ಬಂದಾಗ ನನಗಿಂತಾ ವೇಗ. ಹೀಗೆ ಮೂರೂ ಫ್ಲೋರ್ ಗಳನ್ನ ಸುತ್ತುತಾ ಇರೋವಾಗ ಒಂದು ಪ್ಯಾಂಟ್ ಶರ್ಟ್ ಹಾಕಿದ ಹುಡುಗಿ ಮುದ್ದಾಗಿದಾಳೆ ಅನ್ಸಿ ಸುಮ್ಮನೆ ಅವಳ ಕಡೆ ಕಣ್ಣು ಹಾಯಿಸದೆ. `ಶಿವ ಶಿವ’ ಅವಳ ಕಣ್ಣುಗಳೂ ನನ್ನನ್ನೇ ನೋಡ್ತಾ ಇದ್ವು. ಕರ್ಮ ಕಾಂಡ ಅನ್ಕೊಂಡು ಸುಮ್ಮನೆ ಅಲ್ಲೆಲ್ಲೋ ನೋಡೋ ನಾಟಕ ಆಡಿ ವಾರೆಗಣ್ಣಲ್ಲಿ ನೋಡಿದ್ರೆ ಏನಲೇ ಅನ್ನೋ ಹಾಗೆ ನನ್ನನ್ನೇ ನೋಡ್ತಿದ್ಲು. ಲೈಟ್ ಆಗಿ ಮೀಟರ್ ಆಫ್ ಆಯ್ತು. ಸುಮ್ಮನೆ ಜಾಗ ಖಾಲಿ ಮಾಡೋಣ ಅನ್ಕೊಂಡು ಎಸ್ಕಲೇಟರ್ ಮೇಲೆ ಕಾಲಿಟ್ರೆ ಅವಳೂ ಹಿಂದೆಯೇ ಇದಾಳೆ. ನಂಗ್ಯಾವ್ ಪಜೀತಿನಪ್ಪ ಅನ್ಕೊಂಡು, ಸ್ವಲ್ಪ ಧೈರ್ಯ ತಂದ್ಕೊಂಡು ನಾನೂ ಗುರಾಯ್ಸೋಕೆ ಶುರು ಮಾಡ್ದೆ. ಅವಳ ಹುಬ್ಬು ಮೇಲೆರ್ತಾ ಇತ್ತು. ಕಣ್ಣಲ್ಲೇ ಏನು ಅಂತ ರೆಗಿಸ್ತಾ ಇದ್ಲು. ಅವಳ ಜೊತೆಗೆ ಬೇರೆ ಯಾರೂ ಇಲ್ಲ ಅನ್ನೋದು ಮೊದಲು ಪಕ್ಕಾ ಮಾಡ್ಕೊಂಡು ನಾನೇ ಅವಳ ಹತ್ರ ಹೋಗಿ `ಯಾಕ್ ಮೇಡಂ ಹಂಗೆ ಗುರಾಯಿಸ್ತಿದೀರ’ ಅಂತ ಕೇಳೇ ಬಿಟ್ಟೆ. ಅವಳೂ ಫುಲ್ ರೆಡಿ ಆಗಿದ್ಲು. `ಫರ್ಸ್ಟ್ ಗುರಾಯ್ಸಿದ್ದು ನೀವಾ? ನಾನಾ?’ ಅಂತ ಕೇಳಿದ ಮೇಲೆ ನಾನೂ ನಿಜ ಹೇಳ್ದೆ. ನಾನೇ ಇರ್ಬೋದು ಆದ್ರೆ ಇಷ್ಟು choke ಯಾಕ್ ಕೊಡ್ತಿದೀರ ಅಂತ ಕೇಳ್ದೆ. ಏನಿಲ್ಲ ನಾನೂ observe ಮಾಡ್ದೆ. ತುಂಬಾ active ಆಗಿ ಮಾಲ್ ತುಂಬಾ ಓಡಾಡ್ತಾ ಇದ್ರಲ್ಲ, ಯಾವ್ ತರ್ಲೆ ನೋಡೋಣ ಅನ್ಕೊಂಡು ನಾನೂ ಸ್ವಲ್ಪ ಕಿರಿಕ್ಕ್ ಮಾಡ್ದೆ ಅಂತ ಹೇಳಿದ್ಲು. ಸರಿ ತಪ್ಪಾಯ್ತು ನೀವಿನ್ ಹೊರಡಿ ಅಂತ ನಾನೂ ಹೊರಡೋಕೆ ರೆಡಿ ಆದೆ. `ಅರೆ ಏನ್ ಅರ್ಜೆಂಟು, ಜೊತೆಗೆ ಕಾಫಿನಾದ್ರೂ ಕುಡಿಯೋಣ ಬನ್ರಿ’ ಅಂದವಳೇ ಕಾಫಿ ಡೇ ಕಡೆ ಹೊರಟೇ ಬಿಟ್ಲು. `ನಾನ್ ಕಾಫಿ ಕುಡಿಯಲ್ಲ’ ಅಂತ ಹೇಳಿದ್ರೂ ಸಹ `ಬೇರೆ ಏನಾದ್ರೂ ಕುಡೀಬೋದು ಬನ್ನಿ’ ಅಂತ ಸುಮ್ಮನೆ ಹೊರಟ್ಲು. ನಾನೂ ಹಿಂದಿಂದೆ ಹೊರಟೆ.
ಕಾಫಿ ಡೇಲಿ ಕೂತವಳೇ ಪಟ ಪಟ ಮಾತು ಶುರು ಮಾಡಿದ್ಲು. `ನೀವೆಲ್ಲಾ ಹುಡುಗರೂ ಹೀಗೆ. ಯಾರದ್ರೂ ಒಂಟಿ ಹುಡುಗೀರು ಸಿಕ್ಬಿಟ್ರೆ ಗುರಾಯ್ಸೋಕ್ ಶುರು ಮಾಡ್ಬಿಡ್ತೀರ. ನಮ್ಮಂತ ಘಾಟಿ ಹುಡ್ಗೀರೆ ಸರಿ ನಿಮಗೆ’ ಹಂಗೆ ಹಿಂಗೆ ಅಂತ blast ಮಾಡ್ತಾನೆ ಇದ್ಲು. ಅದರ ಜೊತೆಜೊತೆಗೆ `ನೀವ್ ನೋಡೋಕ್ ಒಳ್ಳೆ ಹುಡುಗನ ತರ ಕಾಣ್ತೀರ, ಅದಕ್ಕೆ ಕಾಫಿಗೆ ಕರದೆ’ ಅನ್ನೋ ಮಾತು ಬೇರೆ ಬರ್ತಿತ್ತು. ನಂಗ್ಯಾವ್ ಕರ್ಮಾನಪ್ಪ ಅನ್ಕೊಂಡು ಸುಮ್ನೆ ಕೇಳಿಸ್ಕೊಂತಿದ್ದೆ. ಯಾವಾಗಲೂ ವಟ ವಟ ಮಾತಾಡೋ ಬಾಯಿ ಅವಳ ಮಾತುಗಳ ಮುಂದೆ silent ಆಗಿತ್ತು. ನನ್ನ ಬಾಯಿ ಮೇಲೆ ನನಗದೆಷ್ಟು ಸಿಟ್ಟು ಬಂದಿತ್ತೋ ನಂಗೆ ಗೊತ್ತು. ಅವಳು ಕಾಫಿ ಕುಡುದ್ಲು, ನಂಗೆ ಚಾಕಲೇಟ್ ಶೇಕ್ ಅವಳೇ ಆರ್ಡರ್ ಮಾಡಿದ್ಲು. ನಾನೂ ಗಟ ಗಟ ಅಂತ ಕುಡೀತಿದ್ರೆ ಅವಳು ಒಂದು ಸಿಪ್ ಕುಡ್ದು ಹತ್ತು ಮಾತಾಡ್ತಾ ಇದ್ಲು. ನಂಗೂ ಸಾಕಾಗಿ ಹೋಗಿತ್ತು. ಕೊನೆಗೆ `ಹೆಸರೇನ್ರಿ ನಿಮ್ಮದು?’ ಅಂದ್ಲು. ತೊದಲ್ತಾ ತೊದಲ್ತಾ `ಕಿರಣ್’ ಅಂತ ಸುಳ್ಳು ಹೇಳ್ಬಿಟ್ಟೆ. ನಿಮ್ದೂ ಅಂದ್ರೆ `ಶೈಲಾ’ ಅಂತ ಹೇಳಿದವಳೇ ನನ್ನ ನಂಬರ್ ಕೇಳಿದ್ಲು. ಅದನ್ನೂ ತಪ್ಪು ತಪ್ಪು ಕೊಟ್ಟೆ. ಅವಳದು ಕೇಳೋದು ಬೇಡ ಅನ್ಕೊಂಡೆ. ಆದ್ರೆ ಅವಳೇ ಕೇಳಿದ್ಲು, `ನಂ ನಂಬರ್ ಬೇಡ್ವ?’ ಅಂತ. `ಕೊಡೋದಾದ್ರೆ ಯಾರ್ ಬೇಡ ಅಂತಾರೆ’ ಅಂತ ನಾನೂ ಡೈಲಾಗ್ ಬಿಟ್ಟೆ. ಅವಳೂ ಅವಳ ನಂಬರ್ ಕೊಟ್ಟು ಬಿಲ್ pay ಮಾಡಿ ಅಲ್ಲಿಂದ bye ಹೇಳಿ ಹೊರಟೇ ಬಿಟ್ಲು. `ಸಿಕ್ ಸಿಕ್ ಹುಡ್ಗೀರ್ಗೆಲ್ಲ ರೆಗಿಸ್ಬೇಡ್ರಿ, ಎಲ್ರೂ ನಂ ತರ ಇರಲ್ಲ’ ಅಂತ ಹೇಳ್ತಾ ಹೇಳ್ತಾ ಬ್ಯಾಗ್ ಸಿಗಿಸ್ಕೊಂಡು ಹೀಲ್ಡ್ ಚಪ್ಪಲಿ ಮೇಲೇರಿ ಹೊರಟೇ ಬಿಟ್ಲು. ನಾನೂ ಉಸ್ಸಪ್ಪಾ ಅಂತ ನಿಟ್ಟುಸಿರು ಬಿಟ್ಟು ಅವಳು ಕೊಟ್ಟ ನಂಬರ್ ಗೆ ಅವಾಗ್ಲೇ dial ಮಾಡ್ದೆ. ಆ ಕಡೆ ಇಂದ ಬಂದ ವಾಯ್ಸ್ ಹೇಳಿದ್ದೇನು ಗೊತ್ತ? `ನೀವು ಕರೆ ಮಾಡಿರುವ ನಂಬರ್ ಸರಿ ಇದೆಯೇ ಪರೀಕ್ಷಿಸಿ. ನಂತರ dial ಮಾಡಿ..’ ಕಾಫಿ ಡೇ ಇಂದ ಹೊರಗೆ ಓಡೋಡಿ ಬಂದು ಅವಳನ್ನ ಹುಡುಕಿದರೆ ಅಲ್ಲೆಲ್ಲೂ ಆ ಜೀವ ಕಾಣಲಿಲ್ಲ. ನಾನೂ ಆಮೇಲೆ ಸಿಕ್ಕ ಸಿಕ್ಕ ಹುಡುಗೀರ ಕಡೆಗೆ ನೋಡಿದ, ಗುರಾಯ್ಸಿದ ಉದಾಹರಣೆ ಇಲ್ಲ. ಆದರೂ ಮನಸೊಳಗೊಂದು ಪ್ರಶ್ನೆ ಹಾಗೇ ಉಳ್ಕೊಂಡಿದೆ. ಅವಳ್ಯಾರು? ಯಾಕ್ ನಂಗೆ ಪುಕ್ಷತ್ತೆ ಬುದ್ದಿ ಹೇಳಿದ್ಲು? ಕಾಫಿ ಡೇಗೆ ಯಾಕ್ ಕರ್ಕೊಂಡ್ ಹೋದ್ಲು? ನಂಬರ್ ಯಾಕ್ ತಪ್ಪು ಕೊಟ್ಳು? ಅದಕ್ಕೇ ಇರಬೇಕು ಹೇಳೋದು, ಮೀನಿನ ಹೆಜ್ಜೆ ಕಂಡು ಹಿಡೀಬೊದು ಆದ್ರೆ ಈ ಹೆಣ್ ಮಕ್ಕಳ ಮನಸಲ್ಲೇನಿದೆ ಅನ್ನೋದನ್ನ ಮಾತ್ರ ಹೇಳೋಕಾಗಲ್ಲ ಅಂತ.. ನಮ್ಮಂತ ಹುಡ್ಗರನ್ನ ಆಂಜನೆಯಾನೆ ಕಾಪಾಡಬೇಕು.ಅಲ್ವಾ?..
ಅದೇನೇ ಇರ್ಲಿ ಸಮಯ ಸಿಕ್ಕಾಗಲೆಲ್ಲ ಗೋಪಾಲನ್ ಮಾಲ್ ನಲ್ಲಿ ಅವಳನ್ನ ನನ್ನ ಕಣ್ಣುಗಳು ಹುಡುಕ್ತಾ ಇವೆ. `ತಪ್ಪಾಯ್ತು ಕಣಮ್ಮ, ಕಣ್ಣು ತೆರೆಸಿದ ಹೆಣ್ಣೇ’ ಅಂತ ಹೇಳುವ ಸಲುವಾಗಿ..
he he he he
olle kathegara kano neenu
good one …..edu nija storry na ..?????????
realy very amazing yar………bt is it true……….?
realy very amazing yar………bt is it real………..???????????
ಹ್ಹ..ಹ್ಹಾ.. ಚೆನ್ನಾಗಿದೆ.
****`ನೀವೆಲ್ಲಾ ಹುಡುಗರೂ ಹೀಗೆ. ಯಾರದ್ರೂ ಒಂಟಿ ಹುಡುಗರು ಸಿಕ್ಬಿಟ್ರೆ ಗುರಾಯ್ಸೋಕ್ ಶುರು ಮಾಡ್ಬಿಡ್ತೀರ.****
ಇಲ್ಲಿ ಒಂಟಿ ಹುಡುಗಿಯರು ಆಗಬೇಕಿತ್ತಲ್ಲವೇ?
ಧನ್ಯವಾದಗಳೊಂದಿಗೆ,
ಪ್ರಸನ್ನ ಶಂಕರಪುರ
ನೀವು ಗಮನಸಿದ ತಪ್ಪುಗಳನ್ನ ಸರಿಪಡಿಸಿದ್ದೇನೆ ಪ್ರಸನ್ನ… ಧನ್ಯವಾದ….
you have wright a one book,and published it.
What a Lovely sir…. Excellent I seen your all story’s and enjoy it. I am waiting your next story………..
With regards
Anil Kajagar
dept of Mass communication and journalism K U Dharwad