ಏಳು ತಿಂಗಳಾಯ್ತು, ಬ್ಲಾಗ್ ನಲ್ಲಿ ಒಂದು ಅಕ್ಷರ ಬರೆದು. ಮತ್ತೆ ಬರೀತೀನಿ ಅಂತ ಹೇಳಿದವನಿಗೆ ಬರೆಯೋಕೆ ಆಗ್ಲೇ ಇಲ್ಲ. ಎಷ್ಟೋ ಸಲ ಟೈಮ್ ಇರ್ಲಿಲ್ಲ. ಟೈಮ್ ಇದ್ದಾಗ ಬರೆಯೋ ಮನಸಿರಲಿಲ್ಲ. ಈಗ ಟೈಮ್ ಮಾಡ್ಕೊಂಡಿದೀನಿ, ಮನಸು ಸಹ ಬರಿ ಬರಿ ಅಂತ ಹೇಳ್ತಾ ಇದೆ. ಸೋ ಹೊಸ ವರ್ಷದಲ್ಲಿ ಒಂದು ಹೊಸ ರೆಸ್ಯುಲೂಶನ್. ಇನ್ ಮೇಲೆ ಎಷ್ಟೇ ಕಷ್ಟ ಆದ್ರೂ ಬರೀತೀನಿ ಅನ್ನೋದು… ಮನಸು ನನಗೆ ಹೇಳಿದ್ದನ್ನ ನಾನು ಅಕ್ಷರ ರೂಪಕ್ಕೆ ತರ್ತೀನಿ. ನಿಮಗೆ ಟೈಮ್ ಇದ್ದಾಗ ಓದಿ. ಅನಿಸಿದ್ದನ್ನ ಹೇಳಿ. ನಂಗೂ ನನ್ನ ಸರಿ ತಪ್ಪುಗಳು ಗೊತ್ತಾಗುತ್ತೆ.
ನಾನು ಈ ಸಲಾನೂ ಕೆಲವು ರೆಸಲ್ಯೂಶನ್ ಹಾಕ್ಕೊಂಡಿದೀನಿ ಅನ್ನೋದು ಮೊದಲ ವಿಶೇಷ. ಪ್ರತಿ ವರ್ಷ ಅನ್ಕೊತಿದ್ದೆ, ಆದ್ರೆ ಪಾಲಿಸ್ತಿರ್ಲಿಲ್ಲ. ಆದ್ರೆ ಈ ಸಲ ಹಾಗಾಗಬಾರದು. ಎಷ್ಟೇ ಕಷ್ಟ ಆದ್ರೂ ಪಾಲಿಸ್ತೀನಿ. ನನ್ನ ರೆಸಲ್ಯೂಶನ್ ಗೆ ನಾನೇ ಮರ್ಯಾದೆ ಕೊಡದಿದ್ರೆ ಹೇಗೆ, ಆಲ್ವಾ? ಏನದು ರೆಸಲ್ಯೂಶನ್ ಅಂದ್ರ..? ಹೇಳ್ತೀನಿ ಕೇಳಿ..
- ಮೊದಲ ಬಹಳ ಕಷ್ಟದ ರೆಸಲ್ಯೂಶನ್… ಇನ್ ಮೇಲೆ ಸಿಕ್ಕಾಪಟ್ಟೆ ದುಡ್ಡು ಖರ್ಚು ಮಾಡಲ್ಲ. ಸುಖಾ ಸುಮ್ನೆ ಅದು ಇದು ಅಂತ ದುಡ್ಡು ವೇಸ್ಟ್ ಮಾಡಲ್ಲ. ಯಾವ್ ಯಾವ್ದುಕ್ಕೋ ಮನಸು ಬಂದ ಹಾಗೆ ಹಣ ಉಡೀಸ್ ಮಾಡಲ್ಲ. ಒಟ್ಟಾರೆ ದುಂದು ವೆಚ್ಚಕ್ಕೆ ದೊಡ್ಡ ಬ್ರೇಕ್ ಹಾಕ್ಬೇಕು ಅಂತ ಡಿಸೈಡ್ ಮಾಡಿದಿನಿ… ಅದೇನಾಗುತ್ತೋ ನಾನೂ ನೋಡ್ತೀನಿ..!!!
- ಇನ್ನು ಎರಡನೆಯ ರೆಸಲ್ಯೂಶನ್… ತಲೆ ಮೇಲೆ ತಲೆ ಬಿದ್ರು ಸಿಕ್ಕ ಸಿಕ್ಕ ಹುಡುಗೀರ ವಿಚಾರಕ್ಕೆ ಹೋಗಲ್ಲ. ಈ ಹುಡುಗೀರ ದೆಸೇಲಿ ನಂಗೆ ನೆಮ್ಮದಿ ಇಲ್ಲ. ಸೋ ನೋ ನ್ಯೂ ಗಲ್ ಫ್ರೆಂಡ್ಸ್..! ನಾನ್ ನಿನ್ನ ಮದುವೆ ಆಗ್ತೀನಿ ಅಂತ ಬಂದು ಈಗ ನನ್ನ ಜೊತೆಗಿರುವ ಹುಡುಗಿ ಮಾತ್ರ ನಂಗೆ ಸ್ವಂತ. ಈ ವರ್ಷ ಅವಳ ಜೊತೆ ನನ್ನ ಎಂಗೇಜ್ಮೆಂಟ್ ಆದ್ರೂ ಮಾಡಿಕೊಳ್ಳಲೇ ಬೇಕು… ನಿಮ್ ಆಶಿರ್ವಾದನು ಇರಲಿ..
- ಮೂರನೆಯ ರೆಸಲ್ಯೂಶನ್… ವರ್ಷ ಮುಗಿಯೋದರೊಳಗೆ ನನ್ನ ಕೈಯಲ್ಲಿ ನನ್ನ ಸ್ವಂತ ಕಾರಿನ ಸ್ಟೇರಿಂಗ್ ಇರ್ಬೇಕು. ಅಂದ್ರೆ ಒಂದು ಕಾರ್ ತಗೋಬೇಕು. ಹೊಸಾದೋ, ಹಳೆದೋ ಗೊತ್ತಿಲ್ಲ.. ನಂದು ಅಂತ ಹೇಳ್ಕೋಳೋಕೆ ನನ್ ಹತ್ರ ಒಂದು ಕಾರ್ ಇರ್ಬೇಕು ಅಷ್ಟೇ. ಆದಷ್ಟು ಬೇಗ ತಗೋಳಪ್ಪ ಅಂತ ಹಾರೈಸ್ಬೇಕಪ್ಪ ನೀವೆಲ್ಲ… !
- ಇನ್ನು ನಾಲ್ಕನೆಯದು… ಪ್ರಮುಖವಾದುದು..! ಹೊಸ ಕೆಲಸ ನನ್ನ ಜೊತೆಗಿದೆ, ಹೊಸ ಜವಾಬ್ದಾರಿ ನನ್ನ ಹೆಗಲೇರಿದೆ. ನಮ್ಮ ಹೊಸ ನ್ಯೂಸ್ ಚಾನೆಲ್ ಇನ್ನೇನು ಸ್ವಲ್ಪ ದಿನದಲ್ಲಿ ಜನರೆದುರು ಬರುತ್ತೆ. ಅದರಲ್ಲಿ ಬರುವ ಒಟ್ಟು ಜಿ ಆರ್ ಪಿ ಯಲ್ಲಿ ವಾರಕ್ಕೆ ಕನಿಷ್ಠ 10 ರಿಂದ 15 ನನ್ನ ಪಾಲಿರ್ಬೇಕು. ಅದಕ್ಕೆ ಎಷ್ಟು ಕಷ್ಟ ಆದ್ರೂ ಹಠ ಬಿಡಬಾರದು. ಇದರ ಅರ್ಥ ,ಪ್ರೊಫೆಶನಲ್ ಲೈಫ್ ನ ಸಖತ್ ಸೀರಿಯಸ್ ಆಗಿ ತಗೋಬೇಕು ಅನ್ನೋದು. ಈ ವರ್ಷ ನನ್ನ ವೃತ್ತಿ ಜೀವನದ ಟರ್ನಿಂಗ್ ಪಾಯಿಂಟ್ ಆಗ್ಬೇಕು. ಆಗೇ ಆಗುತ್ತೆ…
- ಕೊನೆಯ very important ರೆಸಲ್ಯೂಶನ್… ಜೀವ ಹೋದ್ರೂ ನಾನು 2 ವರ್ಷ ಪ್ರೀತಿಸಿದ ಆ ಕೃತಜ್ಞತೆ ಇಲ್ಲದ, ಕಲ್ಲು ಮನಸ್ಸಿನ ಹೆಣ್ಣಿಗೆ ಫೋನ್ ಆಗ್ಲಿ, ಮೆಸೇಜ್ ಆಗ್ಲಿ ಮಾಡಲ್ಲ. ಅವಳು ಮಾಡಿದ್ರೆ ರಿಸೀವ್ ಮಾಡಲ್ಲ. ಅವಳ ಮೆಸೇಜ್ ಗೆ ರಿಪ್ಲೇ ಮಾಡಲ್ಲ. ಇವತ್ತು ನನ್ನ ಜೊತೆ ಫುಲ್ ಮೀಲ್ಸ್ ಇದೆ. ಚಿತ್ರಾನ್ನದ ಮೇಲೆ ಯಾಕೆ ಪ್ರೀತಿ ಇಟ್ಕೊಬೇಕು..? ಆಲ್ವಾ? ಕೈ ಮೇಲಾದ ಗಾಯದ ಗುರುತು ಕಾಣಬಾರದು ಅಂತ ಅದರ ಮೇಲೆ tattoo ಹಾಕಿಸ್ಕೊಂಡು ನಾನ್ ದೊಡ್ಡ ಕ್ವೀನ್ ಅಂತ ಓಡಾಡೋ ಹೆಣ್ಣಿಗಿಂತ, ಆ ಕ್ವೀನ್ ಮಾಡಿ ಹೋದ ಮನಸಿನ ಗಾಯಕ್ಕೆ ಮದ್ದಾಗಿರ್ತೀನಿ ಅಂತ ನನ್ನ ಜೊತೆಗಿರೋ ಜೀವವೇ ಬೆಸ್ಟ್ ಆಲ್ವಾ? ಸೋ ಈ ಹೊಸ ವರ್ಷದಿಂದ ಹಳೆಯ ಹುಡುಗಿಯ ನೆನಪಿಲ್ಲ, ಅವಳು ಕೊಟ್ಟ ನೋವಿನ ಕನವರಿಕೆ ಇಲ್ಲ. ಈಗ ಅವಳ ಮೊಬೈಲ್ ನಂಬರ್ರೇ ನನ್ನ ಮೊಬೈಲ್ ನಲ್ಲಿ ಇಲ್ಲ ಬಿಡಿ..!
ಇದಿಷ್ಟು ಈ ವರ್ಷದ ಮಹಾನ್ ರೆಸಲ್ಯೂಶನ್ಸ್.. ಎಷ್ಟು ಪಾಲಿಸ್ತೀನೋ ಗೊತ್ತಿಲ್ಲ… ಆದ್ರೆ ನಾಲ್ಕನೇ ಮತ್ತು ಕೊನೆಯ ರೆಸಲ್ಯೂಶನ್ ಮಾತ್ರ ಜೀವ ಹೋದ್ರೂ ಪಾಲಿಸ್ತೀನಿ… ಬರೀತಾ ಇದ್ರೆ ನಾನ್ ಬರೀತಾನೆ ಇರ್ತೀನಿ… ಇನ್ ಸ್ವಲ್ಪ ಹೊತ್ತು ಲ್ಯಾಪ್ ಟಾಪ್ ಕುಟ್ತಾ ಇದ್ರೆ ನಮ್ಮ ಬಂದು ನಂಗೆ ಕುಟ್ಟೋ ಚಾನ್ಸ್ ಇದೆ… ಇವತ್ತಿಗೆ ಇಷ್ಟು. ನೀವೂ ರೆಸಲ್ಯೂಶನ್ ಏನಾದ್ರು ಹಾಕ್ಕೊಂಡಿದ್ರೆ ಪಾಲಿಸ್ರಪ್ಪ. ನಿಮ್ ಒಳ್ಳೇದಕ್ಕೆ…! ಅಂದ ಹಾಗೆ ನಾನೆಂದೂ ಪಾಲಿಸದ ನನ್ನ ಇನ್ನೊಂದು ರೆಸಲ್ಯ್ಯೂಶನ್ ಒಂದಿದೆ… ಈ ವರ್ಷದಿಂದ ಗ್ಯಾರಂಟಿ ಜಿಮ್ ಗೆ ಹೋಗ್ತೀನಿ…! ಕನಿಷ್ಠ 10 ಕೆಜಿ ತೂಕ ಜಾಸ್ತಿ ಮಾಡ್ಕೊತೀನಿ..! Please dont laugh.. Im serious..
lol!!!!!!!!!!! u n gym?????????? modlu time maadkondu namgalna matadsu… amele gym ge hoguvante
ha ha ha jym ha ha ha ha let us c ………………..anyways all d best dear bro……dnt worry u will get all u wnt in dis yr…….