`ಕಂದಾ ಇದೊಂದು ಚಾಕಲೇಟ್ ತಗೊಳೇ’ ಅಂತ ಸಾವಿರ ಸಲ ಕೇಳಿದ್ರು ಮುಟ್ಟುವ ಜಾಯಮಾನ ಅವಳದಲ್ಲ.. ನಾನ್ ಕೇಳಿದ್ರೆ ತಂದು ಕೊಡು, ನಾನ್ ಕೇಳ್ದಾಗ ಕೊಡ್ಸು ಅಂತ ಹೇಳಿ ಇಲ್ಲಿ ತನಕ ನನ್ನ ಹತ್ರ ಏನೂ ಇಸ್ಕೊಂಡಿಲ್ಲ ಅವಳು. ನಂಗೆ ಆಶ್ಚರ್ಯ, ಅರೆ ಹುಡುಗೀರು ಹೀಗೂ ಇರ್ತಾರ ಅಂತ. ನಂಗೆ ಇದೇ ಬೇಕು, ಅದೇ ಬೇಕು ಅಂತ ಹಠ ಹಿಡಿದು ಕೊಡಿಸ್ಕೊಂಡ ಹುಡುಗೀರು ನನ್ನ ಜೊತೆಗಿದ್ರು. ಆದ್ರೆ ಇವಳು ಅವರೆಲ್ಲರಿಗಿಂತ ವಿಚಿತ್ರ, ವಿಶಿಷ್ಟ. ಅಂದ ಹಾಗೇ ಇವಳು ನನ್ನ ಹುಡುಗಿ. ಇನ್ನೇನು ಸ್ವಲ್ಪ ದಿನದಲ್ಲಿ ನನ್ನ ಕಷ್ಟ ಸುಖಕ್ಕೆ ಜೊತೆಯಾಗೋ ನನ್ನ ಬಾಳ ಸಂಗಾತಿ ಆಗೋ ಹುಡುಗಿ. ಅವಳ ಹೆಸರು ಕೇಳಬೇಡಿ, ಅವಳು ನನಗೆ ಮಾತ್ರ ಅರ್ಪಿತ…
ನಾವಿಬ್ರು ಮದುವೆಯಾಗಬೇಕು ಅಂತ ನಿರ್ಧಾರ ಮಾಡೋಕೆ ಮುಂಚೆ ಕನಿಷ್ಠ 1 ವರ್ಷದಿಂದ ಅವಳು ನಂಗೆ ಫ್ರೆಂಡ್ ಆಗಿ ಪರಿಚಯ, ಆದ್ರೆ ಯಾವತ್ತೂ ಅವಳಿಗೋಸ್ಕರ ನಾನು ಖರ್ಚು ಮಾಡಿದ ಉದಾಹರಣೆ ಇಲ್ಲ. ಹೆಚ್ಚಂದರೆ ಕಾಫಿ ಡೇ ಬಿಲ್, ಆಗಾಗ ಕೊಟ್ಟ ರೋಸ್, ಅದಕ್ಕಿಂತ ಹೆಚ್ಚಂದರೆ ಜೊತೆಗೆ ಮಾಡಿದ ಊಟ, ಅಷ್ಟೇ. ಇನ್ನೇನೆ ಕೇಳಿದ್ರು ನಂಗೆ ಬೇಡ, ನಂಗಿಷ್ಟ ಇಲ್ಲ. ಇದು ಅವಳ ರೆಡಿಮೇಡ್ ಆನ್ಸರ್. ನಂಗೂ ಸಾಕಾಗಿ ಈಗ ಕೇಳೋದೇ ಬಿಟ್ಟಿದೀನಿ. ಕೆಲವು ಹುಡುಗೀರು ಹಾಗಿರ್ತಾರೆ, ಅವರಿಗೆ ಬಾಯ್ ಫ್ರೆಂಡ್ ಅಂದ್ರೆ ಏಟಿಎಂ ಇದ್ದ ಹಾಗೆ. ಕೇಳಿದ್ದೆಲ್ಲಾ ಕೊಡೋ ಅಕ್ಷಯ ಪಾತ್ರೆ. ತನ್ನ ಜೇಬಲ್ಲಿ 10 ರುಪಾಯ್ ಇಲ್ಲದೆ ಇದ್ರೂ ಸಾವಿರ ರುಪಾಯಿ ಸಾಲ ಮಾಡಿ ತಂದು ಅವಳ ಇಷ್ಟವನ್ನ ಪೂರೈಸೋ ಎಷ್ಟು ಮೂರ್ಖ ಹುಡುಗರಿಲ್ಲ..! ಅಂತಹ ಹುಡುಗಿ ಜೊತೆಗಿರೋ ತನಕ ಅಂತಹ ಹುಡುಗರು ಬುದ್ದಿ ಕಲಿಯೋದೇ ಇಲ್ಲ. ನಮಗೆ ನಾವು ಮಾಡ್ತಿರೋದು ತಪ್ಪು ಅಂತ ಅರ್ಥ ಆಗಿ ಇನ್ನು ಮುಂದೆ ಖರ್ಚು ಕಮ್ಮಿ ಮಾಡ್ಬೇಕು ಅಂತ ಡಿಸೈಡ್ ಮಾಡಿದ್ರೆ ಅವಳು ನಮ್ಮನ್ನ ಬಿಟ್ಟು ಹೋಗೋಕೆ ಡಿಸೈಡ್ ಮಾಡಿರ್ತಾಳೆ. ನಮ್ಮಂತ ಹುಡುಗರು ಬಾಯ್ ಬಾಯ್ ಬಡ್ಕೊಬೇಕು. ಅವರು ಇನ್ಯಾರದೋ ಜೊತೇಲಿ ನಮ್ ಜೊತೆ ಮಾಡಿದ ತರದ್ದೇ ಶಾಪಿಂಗ್ ಮಾಡ್ತಿರ್ತಾರೆ. ಪಾಪ ಅವನು ಮಾತ್ರ ಯಾವತ್ತೋ ನಾವು ಬಕ್ರಾ ಆದ ಹಾಗೇ ಆಗ್ತಿರ್ತಾನೆ. ನಮ್ಮಂತ ಸೀನಿಯರ್ ಗಳ ಮಾತು ಕೇಳೋದೂ ಇಲ್ಲ. ಮತ್ಯಾವತ್ತೋ ಒಂದು ದಿನ ಅವನೂ ನಮ್ಮ ಸಂಘದ ಸದಸ್ಯ. ಅಂತಹ ಹುಡುಗೀರು ಮಾತ್ರ ಅಪ್ಪ ತೋರಿಸಿದ ಹುಡುಗನಿಗೆ ಸ್ವಂತ. ನಮ್ಮ ಕಥೆ ಗೋವಿಂದಾ ಗೋವಿಂದ..
`ಆದದ್ದೆಲ್ಲ ಒಳ್ಳೆಯದಕ್ಕೆ ಆಗುತ್ತದೆ’ ಅಂತ ಗೀತ ಸಾರದಲ್ಲಿ ಹೇಳಿದ್ದನ್ನ ನಾನು ಎಷ್ಟೋ ದಿನ ಒಪ್ಪಿರಲಿಲ್ಲ. ಈಗ ಒಪ್ಪಿಕೊಳ್ತೀನಿ..! ಕಾರಣ, ನಾನೇ ಅದಕ್ಕೆ ಬೆಸ್ಟ್ ಎಕ್ಸಾಂಪಲ್. ಯಾಕೆ, ಏನು ಅಂತೆಲ್ಲ ಕೇಳಬೇಡಿ. ಹೇಳುವುದಕ್ಕೂ, ಕೇಳುವುದಕ್ಕೂ ಇದು ಸಮಯವಲ್ಲ. ಸರಿ ಕಮಿಂಗ್ ಟು ದ ಪಾಯಿಂಟ್, ನಾನೀಗ ನಿರಾಳ. ಅವತ್ತೂ ಖರ್ಚು ಮಾಡೋಕೆ ಮನಸ್ಸಿಲ್ಲದಿದ್ರೂ ಅವಳ ಒತ್ತಾಯಕ್ಕೆ ಖರ್ಚು ಮಾಡಬೇಕಿತ್ತು. ಆದ್ರೆ ಇವತ್ತು ನಾನೇ ಖರ್ಚ್ ಮಾಡ್ಬೇಕು ಅಂದುಕೊಂಡರೂ ಅವಳು ಬಿಡೋದಿಲ್ಲ. ಕಾಲಾಯ ತಸ್ಮೈ ನಮಃ…!
ಸರಿ ಸರಿ ಜೊತೆಗಿರುವ ಹುಡುಗಿ ಕೊನೆ ತನಕ ನಿನ್ ಜೊತೆಗಿರ್ತೀನಿ ಅಂತ ಪ್ರಾಮಿಸ್ ಮಾಡಿದಾಳೆ. ಅವಳ ಉಳಿತಾಯ ಯೋಜನೆ ನಮ್ಮ ಮುಂದಿನ ಭವಿಷ್ಯ ಕಟ್ಟಿ ಕೊಡೋದ್ರಲ್ಲಿ ಅನುಮಾನವಿಲ್ಲ. ಅಂದ ಹಾಗೇ ಮೊನ್ನೆ ಅವಳು ನನ್ನ ಕಿವಿಗೆ ಒಂದು ಬಂಗಾರದ ಟಿಕ್ಕಿ ಹಾಕಿ ಹೋಗಿದಾಳೆ. 2 ವರ್ಷದವನಿದ್ದಾಗ ಮುಚ್ಚಿ ಹೋಗಿದ್ದ ಕಿವಿಯ ತೂತು ಅವಳ ಮಾತಿಗೆ ಮತ್ತೆ ಓಪನ್ ಆಗಿ, ಅದರೊಳಗೆ ಅವಳು ಕೊಟ್ಟು ಹೋದ ಟಿಕ್ಕಿ ಭದ್ರ.. ಅಮ್ಮ ಹೇಳ್ತಿರ್ತಾರೆ, `ಎಲ್ರೂ ನಿನ್ ಕಿವಿಗೆ ಹೂ ಇಟ್ಟು ಹೋದ್ರೂ.. ಇವಳೊಬ್ಬಳೆ ಬಂಗಾರ ಇಟ್ಟಿದ್ದು’ ಅಂತ.. ಅದೂ ನಿಜಾನೆ.. ಎನಿವೇ ಎಲ್ಲಾ ಒಳ್ಳೆಯದಾದ್ರೆ ಸ್ವಲ್ಪ ದಿನದಲ್ಲಿ ನಮ್ಮಿಬ್ಬರಿಗೂ ಮದುವೆ. ಅದೂ ರಿಜಿಸ್ಟರ್ ಮ್ಯಾರೇಜ್..! ಯಾಕೆ ಅಂದ್ರ.. ಖರ್ಚು ಮಾಡಬಾರದು ಕಣ್ರೀ… ಏನಂತೀರಿ… ?

ಒಳ್ಳೇದಾಗ್ಲಿ ಅಂತೀನಿ..
Amma helid correct…!!! E hudgi nin balinalli bangara agirli anta harasuva.. ninna balya snehita..
SUMAN
All the best c…
its a nice one…very direct n very simple..as u
ದೇವರು ಒಳ್ಳೆದು ಮಾಡ್ಲೀ ಬ್ರದರ್… ಈ ವರ್ಷ ನಿಮ್ಮ ಎಲ್ಲ ಕನಸುಗಳು ಈಡೇರ್ಲಿ… ನಿಮ್ಮ ಇಚ್ಛೆಯಂತೆ ನಿವು ಮದ್ವೆ ಆಗೀ ಸುಖವಾಗಿರಿ… ಎನೀವೇ ಅಡ್ವಾನ್ಸ್ ಹ್ಯಾಪಿ ಮ್ಯಾರೀಡ್ ಲೈಫ್…
ದೇವರು ನಿಮಗೆ ಒಳ್ಳೇದನ ಮಾಡ್ಲಿ ಹಾಗು ಸುಖ,ಶಾಂತಿ,ಸಂತೋಷ,ಆನಂದ,ನೆಮ್ಮದಿಯನ್ನ ಕೊಡ್ಲಿ
ಇಂತಿ ನಿಮ್ಮ ಪ್ರೀತಿಯ ನಂದಿ
ಬಂಗಾರ ಇಟ್ಟವಳ ಜೊತೆ ಬಂಗಾರದಂತೆ ಬಾಳೋ ಗೆಳೆಯಾ…
I knw wat im…