ಗೂಗಲ್ ಇಡೀ ಪ್ರಪಂಚ ಅತಿ ಹೆಚ್ಚು ಉಪಯೋಗಿಸೋ ಸರ್ಚ್ ಇಂಜಿನ್. ಭಾರತೀಯರಿಗೂ ಇದು ಅಚ್ಚುಮೆಚ್ಚು. ಗೂಗಲ್ ಅತಿ ಹೆಚ್ಚು ಉಪಯೋಗಿಸುವ ರಾಷ್ಟ್ರಗಳಲ್ಲಿ ಭಾರತವೂ ಒಂದು. ಆದ್ರೆ ಗೂಗಲ್ ಭಾರತೀಯರಿಗೆ ಮಾಡಿದ ದ್ರೋಹ ಮಾತ್ರ ಕ್ಷಮಿಸಲು ಅಸಾಧ್ಯ. ಈಗಾಗಲೇ ಅತ್ತ ಪಾಕಿಸ್ತಾನ, ಇತ್ತ ಚೀನಾದ ಹಾವಳಿ ಭಾರತಕ್ಕೆ ಸೆರಗಿನ ಕೆಂಡವಾಗಿ ಪರಿಣಮಿಸಿದೆ. ಅದೇ ಸಮಯಕ್ಕೆ ಗೂಗಲ್ ಭಾರತದ ನಕ್ಷೆಯನ್ನೇ ಬದಲಾಯಿಸಿಬಿಟ್ಟಿದೆ.
ಅದರಲ್ಲೂ ಎರೆಡೆರೆಡು ರೀತಿಯ ನಕ್ಷೆ ರೂಪಿಸಿ ಭಾರತದ ಕಣ್ಣಿಗೆ ಸುಣ್ಣ ಬಳಿದು, ಚೀನಾಗೆ ಬೆಣ್ಣೆ ಹಚ್ಚುವ ಕಾರ್ಯಕ್ಕೆ ಕೈ ಹಾಕಿದೆ.
ಅರುಣಾಚಲ ಪ್ರದೇಶದ ವಿಚಾರವಾಗಿ ಭಾರತ ಮತ್ತು ಚೀನಾ ನಡುವೆ ಜಿದ್ದಾಜಿದ್ದಿ ನಡೀತಾನೆ ಇದೆ. ಇದೆ ಸಂದರ್ಭದಲ್ಲಿ ಗೂಗಲ್ ಮಾಡಿರೋದೆನು ಗೊತ್ತ? ಭಾರತದ ನಕ್ಷೆಯಲ್ಲಿ ಅರುಣಾಚಲ ಪ್ರದೇಶವನ್ನು ಬೇಕೋ ಬೇಡವೋ ಎಂಬಂತೆ ವಿವಾದಿತ ಸ್ಥಳ ಎಂಬಂತೆ ಬಿಂಬಿಸಿದರೆ, ಚೀನಾ ಭಾಷೆಯಲ್ಲಿರೋ ಭಾರತದ ನಕ್ಷೆಯಲ್ಲಿ ಅರುಣಾಚಲ ಪ್ರದೇಶವೇ ಇಲ್ಲ. ಅದು ಸಂಪೂರ್ಣ ಚೀನಾದ ಪಾಲಾಗಿದೆ. ಯಾವ ಆಧಾರದ ಮೇಲೆ ಈ ನಕ್ಷೆಯನ್ನ ಗೂಗಲ್ ಸಿದ್ದಪಡಿಸಿದೆ ಎಂಬುದೇ ಈಗಿರುವ ಪ್ರಶ್ನೆ.
ಭಾರತೀಯ version ನಕ್ಷೆಗಾಗಿ maps.google.com ಗೆ ಭೀತಿ ನೀಡಿ. ಚೀನೀ ಭಾಷೆಯ ನಕ್ಷೆಗೆ ditu.google.com ನೋಡಿ.
ಇದರ ಜೊತೆಗೆ ಗೂಗಲ್ ಜಮ್ಮು ಕಾಶ್ಮೀರದ ಒಂದು ಭಾಗವನ್ನೇ ಚೀನಾಗೆ ಧಾರೆ ಎರೆದು ಕೊಟ್ಟುಬಿಟ್ಟಿದೆ. ಭಾರತೀಯ version ನಲ್ಲಿ ಯಾವ ಭಾಗವನ್ನು ವಿವಾದಿತ ಎಂಬಂತೆ ಬಿಂಬಿಸಿದೆಯೋ ಆ ಭಾಗವನ್ನು ಗೂಗಲ್ ಚೀನಾ ಭಾಷೆಯ ನಕ್ಷೆಯಲ್ಲಿ ಚೀನಾಗೆ ಧಾರೆ ಎರೆದಿದೆ. ಗೂಗಲ್ ಈ ರೀತಿ ಪಾಗಲ್ ಪಾಗಲ್ ಆಗಿ ಗಡಿ ವಿಚಾರದಲ್ಲಿ ಆಟವಾಡ್ತಾ ಇರೋದು ಎಷ್ಟರ ಮಟ್ಟಿಗೆ ಸರಿ ಎಂಬುದನ್ನ ಯೋಚಿಸಬೇಕಾಗಿದೆ. ಇಲ್ಲವಾದರೆ ಅನುಮಾನವೇ ಬೇಡ, ಹಂತ ಹಂತವಾಗಿ ಭಾರತದ ಭೂಪಟ ಬದಲಾಗುತ್ತಲೇ ಇರುತ್ತೆ. ಅತ್ತ ಚೀನಾ ಇತ್ತ ಪಾಕ್ ಪ್ರಾಬಲ್ಯ ಮೆರೆಯುತ್ತಲೇ ಸಾಗುತ್ತವೆ. ಓ ದೇವ್ರೇ ಈ ರಾಜಕಾರಣಿಗಳಿಗೆ ದೇಶದ ಬಗ್ಗೆ ಯೋಚಿಸೋ ಮನಸ್ಥಿತಿಯನ್ನ ಕೊಡು..
its goood
this shows our weakness it is duty of govt of india to set it correct.