ನಾನ್ಯಾವತ್ತೂ ಅಂದುಕೊಂಡಿರಲಿಲ್ಲ, ನಾನೊಂದು ದಿನ ಕರ್ಫ್ಯೂ ಸಂಧರ್ಭದಲ್ಲಿ ರಿಪೋರ್ಟಿಂಗ್ ಮಾಡ್ತೀನಿ ಅಂತ. ಯಾವ್ದೋ ಶೂಟಿಂಗಿಗೆ ಅಂತ ಶಿವಮೊಗ್ಗಕ್ಕೆ ಹೋಗಿದ್ದವನು ನಾನು. ಇದ್ದಕ್ಕಿದ್ದ ಹಾಗೇ ಫೋನೇ ಬಂತು ಅಲ್ಲಿ ಗಲಾಟೆ ಅಂತೆ, ಶಿವಮೊಗ್ಗ ರಿಪೋರ್ಟರ್ ಗೆ ತಲೆಗೆ ಹೊಡೆತ ಬಿದ್ದಿದ್ಯಂತೆ ಅಂತ. ಆ ಫೋನೇ ಕಟ್ ಮಾಡಿ ಇಡೋದ್ರೊಳಗೆ ನನ್ನ ಬಾಸ್ ರಂಗನಾಥ್ ಸರ್ ಫೋನೇ ಬಂತು. ಅಲ್ಲಿಂದ ಸುದ್ದಿ ಕೊಡೋಕೆ ಶುರು ಮಾಡು. ನೀನೆ ಎಲ್ಲಾ ಸುದ್ದಿ ಕೊಡಬೇಕು ಅಂತ. ಮೈ ಜುಮ್ ಅಂತು. ಆದರೂ ಜೈ ಅಂತ ಸ್ಪಾಟ್ ಗೆ ಹೊರಟೆ. ಅಷ್ಟರಲ್ಲಿ ಶಿವಮೊಗ್ಗ ಹೊತ್ತಿ ಉರಿಯುತ್ತಿತ್ತು. ಕೈಲಿ ಲೋಗೋ ಮೈಕ್ ಹಿಡಿದವನೇ ಕಿರಣ್, ಆತಿಕ್, ನವೀನ್ ಅನ್ನೋ ಯಾವ್ದಕ್ಕೂ ಸೈ ಅನ್ನೋ ಕ್ಯಾಮರಾ ಮೆನ್ ಗಳ ಜೊತೆ ಸ್ಥಳಕ್ಕೆ ಹೊರಟೆ ಬಿಟ್ಟೆ. ನಾನು ಹೋಗುವ ಹೊತ್ತಿಗೆ ಗೋಪಿ ಸರ್ಕಲ್ ನಲ್ಲಿ ಆಟೋ ಒಂದಕ್ಕೆ ಬೆಂಕಿ ಹಚ್ತಾ ಇದ್ರು. ಸ್ವಲ್ಪ ಹಿಂದೆ ತಿರುಗಿದರೆ ಬಟ್ಟೆ ಅಂಗಡಿ ಒಂದು ಧಗ ಧಗನೆ ಹತ್ತಿ ಉರೀತಿತ್ತು. ತಡ ಮಾಡ್ಲಿಲ್ಲ ಮೈಕ್ ಹಿಡಿದವನೇ ಎಲ್ಲಿ ಏನೇನು ನಡೀತಿದೆ ಅನ್ನೋದನ್ನ ಹೇಳ್ತಾ ಹೋದೆ. ಕಿರಣ, ಆತಿಕ್ ಎಲ್ಲವನ್ನೂ ರೆಕಾರ್ಡ್ ಮಾಡ್ತಾ ಇದ್ರು. ಅಷ್ಟರಲ್ಲಿ ಜೆ ಪಿ ಎನ್ ರೋಡಿನಲ್ಲಿ 2-3 ಸಾವಿರ ಜನರ ಗುಂಪು ಕಲ್ಲು ತೂರ್ತಾ ಪೋಲಿಸರೆಡೆಗೆ ಬಂತು. ಅದರ ಮುಂದೆ ನಿಂತು ನಾನು ಸುದ್ದಿಯಾ ಚಿತ್ರಣ ನೀಡ್ತಾ ಹೋದೆ. ಲಾಟಿ ಚಾರ್ಜ್ ಆಗುವಾಗ ಪೋಲೀಸರ ಜೊತೆ ನಾನು, ನನ್ನ ಕ್ಯಾಮರಾ ಮೆನ್ ಸಹ ನುಗ್ಗಿದ್ವಿ. ಇದೆಲ್ಲದರ ಮೊದಲ ವಾಕ್ ತ್ರೂ ಸುವರ್ಣ ನ್ಯೂಸ್ನಲ್ಲಿ ಪ್ರಸಾರವಾಯ್ತು.
ಸಂಜೆ ಹೊತ್ತಿಗೆ ಶಿವಮೊಗ್ಗ ನಗರಕ್ಕೆ ಕರ್ಫ್ಯೂ ಹೇರಲಾಯ್ತು. ಅಲ್ಲಿಂದ ಮುಂದೆ 50-60 ಗಂಟೆಗಳ ತನಕ ಸುವರ್ಣ ನ್ಯೂಸ್ ನಲ್ಲಿ ನನ್ನ ಮುಖ ನನ್ನ ಧ್ವನಿ ಸಾಕಷ್ಟು ಸಲ ಕಾಣಿಸಿಕೊಳ್ತು.. ಒಂದೊಂದೇ ಫೋನೇ ಗಳು ಬರೋಕೆ ಶುರು ಆದವು. ಒಳ್ಳೆ reporting ಅಂತ ಹೊಗಳಿಕೆ ಬಂತು. ಅದೇ ಹುರುಪಿನಲ್ಲಿ ಕೆಲಸ ಮುಂದುವರಿಸ್ದೆ.. ರಾತ್ರಿ 11ರ ತನಕ ಸುದ್ದಿ ಕೊಡ್ತಾನೆ ಇದ್ದೆ. ಮರು ದಿನ ಬೆಳಿಗ್ಗೆ ಎದ್ದವನೇ ಇಡೀ ಶಿವಮೊಗ್ಗ ಸುತ್ತಿ ಎಲ್ಲಿಲ್ಲಿ ಏನಾಯ್ತು ಅನ್ನೋ ವಾಕ್ ತ್ರೂ ಕೊಟ್ಟೆ. ಬರೋಬ್ಬರಿ 12 ನಿಮಿಷ ಇಟ್ಟು. ಆದ್ರೆ ಒಂಚೂರು ಕಟ್ ಆಗದೆ ಅದು 3 ಸಲ ನ್ಯೂಸ್ ನಲ್ಲಿ ಟೆಲಿಕಾಸ್ಟ್ ಆಯ್ತು. ಅಡ್ಡದ ನಂತರ ಕರ್ಫ್ಯೂ ಶಿವಮೊಗ್ಗ ಜನರನ್ನ ಹೇಗೆ ತತ್ತರ ಆಗೋ ಹಾಗೇ ಮಾಡಿದೆ ಅನ್ನೋದನ್ನ ಕವರ್ ಮಾಡಿ ಮತ್ತೊಂದು ವಾಕ್ ತ್ರೂ ಮಾಡಿದೆ. ಅದಾದ ಮೇಲೆ ನಡೆದ ಗಲಭೆ, ಗಲಾಟೆ, ಬೆಳವಣಿಗೆ ಎಲ್ಲವನ್ನೂ ತುಂಬಾ ಸೂಕ್ಷ್ಮವಾಗಿ ಕವರ್ ಮಾಡಿ ಸುದ್ದಿ ಕೊಡ್ತಾ ಬಂದೆ. ಅದು ಕೋಮು ಗಲಭೆ ಆಗಿದ್ರಿಂದ ಮಾಧ್ಯಮದವರಾಗಿ ನಾವೂ ಸಹ ಸ್ವಲ್ಪ ಜವಾಬ್ದಾರಿಯುತವಾಗಿಯೇ ಸುದ್ದಿ ಮಾಡಬೇಕಾಗಿತ್ತು. ಅದನ್ನ ನಾನು ಚೆನ್ನಾಗಿ ನಿಭಾಯಿಸದೆ ಅಂತ ಎಲ್ಲರೂ ಫೋನ್ ಮಾಡಿ ಹೇಳಿದ್ರು. ಮಾರನೆ ದಿನ ಒಂದೂವರೆ ಗಂಟೆ ಕಾಲ ಕರ್ಫ್ಯೂ ಸಡಿಲಿಕೆ ಆದಾಗ ಅಲ್ಲಿನ ಪರಿಸ್ತಿತಿಯನ್ನ ನನ್ನದೇ ಸ್ಟೈಲ್ ನಲ್ಲಿ ಮತ್ತೊಂದು ವಾಕ್ ತ್ರೂ ಮೂಲಕ ವಿವರಿಸದೆ. ಎಲ್ಲವೂ ಸಕ್ಸಸ್ ಫುಲ್ … ತುಂಬಾ ಖುಷಿ ಅನ್ನಿಸ್ತು… ಕರ್ಫ್ಯೂ ಸಡಿಲಿಕೆ ದಿನ ನನ್ನನ್ನ ಶಿವಮೊಗ್ಗದ ಜನ ಗುತಿಸಿದ್ರು. ಸುವರ್ಣ ನ್ಯೂಸ್ ಕೀರ್ತಿ ಶಂಕರಘಟ್ಟ ಅಂತ ಮಾತಾಡ್ಸಿದ್ರು. ತುಂಬಾ ಖುಷಿ ಆಯ್ತು. ನಾನು ಸಹ ಎಂತಹ ಸಂಧರ್ಬದಲ್ಲೂ roporting ಮಾಡಬಲ್ಲೆ ಅನ್ನೋದನ್ನ ಸಾಭೀತು ಪಡಿಸಲಿಕ್ಕೆ ಒಂದು ಅವಕಾಶ ಸಿಕ್ತು. ನನ್ನ ಬಗ್ಗೆ ನನಗೆ ಖುಷಿ ಅನ್ನಿಸ್ತು. ಬರುವಾಗ ಅಮ್ಮನ್ನ ಮಾತಾಡಿಸೋಕೆ ಮನೆಗೆ ಹೋಗಿದ್ದೆ ಅಮ್ಮ ಖುಷೀಲಿ ದೃಷ್ಟಿ ತೆಗೆದು ಮುದ್ದು ಮಾಡಿ ಕಳಿಸಿದರು. 4 ವರ್ಷದಿಂದ ಮಾಧ್ಯಮದಲ್ಲಿದ್ದಿದ್ದು ಸಾರ್ಥಕ ಅನ್ನಿಸ್ತು. ಇನ್ನಷ್ಟು ಸಾಧಿಸೋ ಆಸೆ ಚಿಗುರೊಡೀತು.
ಈ ಅನುಭವವನ್ನ ಒಂದು ಪುಸ್ತಕವಾಗಿಸೋ ಆಸೆ ಇದೆ… ಏನಾಗುತ್ತೋ ನೋಡ್ಬೇಕು…
[…] ನಾನ್ ಕೀರ್ತಿ […]
ನಮಸ್ತೆ ಶಂಕರ್,
ಮೊದಲಿನಿಂದನೂ ನಿಮ್ಮ ಬರಹವನ್ನು ಓದುತ್ತಿದ್ದೇನೆ,ನಿಮ್ಮ ಬರವಣಿಗೆ ಅಂದರೆ ನನಗೆ ತುಂಭಾ ಇಷ್ಟ, ನಿಮಗೆ ಹಲವು ಬಾರಿ ಸಂಪರ್ಕಿಸಿದ್ದೇನೆ, ಆದರೆ ನಿಮ್ಮನ್ನು ನೋಡಿರಲಿಲ್ಲ, ಅಂದು ಮುಂಜಾನೆ ಬೆಳಗ್ಗೆ ಸುವರ್ಣ ನ್ಯೂಸ್ ನೋಡ್ತಾ ಇದ್ದೆ, ನೀವು ಆ ಊರಿನ ಪರಿಸ್ತಿತಿಯನ್ನು ವಿವರಿಸುತ್ತ ಇದ್ದ್ರಿ, ಆದರೆ ನೀವೇ ಅಂತ ಗೊತ್ತಿರ್ಲಿಲ್ಲ, ನಿಮ್ಮನ್ನು ನೋಡಿ ಸಂತಸವಾಯಿತು. ತುಂಭಾ ಚೆನ್ನಾಗಿ ಕಾರ್ಯಕ್ರಮವನ್ನು ನಡೆಸಿಕೊಟ್ರಿ.
ಪ್ರದೀಪ