ನಾನ್ಯಾಕೋ ಇತ್ತೀಚಿಗೆ ಸೋಂಬೇರಿ ಆಗಿಬಿಟ್ನಾ ಅನ್ನಿಸ್ತಿದೆ.. ಕೆಲಸ ಇದೆ, ಒಪ್ಕೊಳೋಣ. ಹಂಗಂತಾ ವಾರಕ್ಕೆ ಒಂದು ಪೇಜ್ ಬರೆಯೋಕು ಆಗದಷ್ಟು ಬ್ಯುಸೀನ ??? ಇದ್ರೂ ಇರಬಹುದು… ಆದ್ರೂ ಬರೀಬೇಕು. ಬರೆದ್ರೆ ಮಾತ್ರ ಮನಸು ಹಗುರಾಗೋದು. ಹಾಗಾಗಿ ಮತ್ತೆ ಬರೆಯೋಕೆ ಕೂತಿದಿನಿ. ಇನ್ಮೇಲೆ ಸಮಯ ಸಿಕಾಗ್ಲೆಲ್ಲ ಬರೀತಾ ಇರ್ತೀನಿ, ನೀವು ಸಮಯ ಸಿಕ್ಕಾಗಲೆಲ್ಲಾ ಓದ್ತಾ ಇರಿ. ನೀವ್ ಓದಿದರೆ ಮಾತ್ರ ನಂಗೂ ಬರೀಬೇಕು ಅನ್ಸೋದು… ಜಾಸ್ತಿ ಕುಯ್ಯೋದಿಲ್ಲ ಡೈರೆಕ್ಟ್ ಆಗಿ ವಿಷಯಕ್ಕೆ ಬರ್ತೀನಿ. ನಾನು ಬರೀದೇ ಇರೋ ಈ ಆರೇಳು ತಿಂಗಳೊಳಗೆ ಏನೆಲ್ಲಾ ಆಗಿಹೋಯ್ತು. ನಾನು ಸುವರ್ಣದ ಅಂಗಳದ ಒಳಗೆ ಸಿಕ್ಕಾಪಟ್ಟೆ ಬ್ಯುಸಿ ಆಗಿ ಹೋದೆ. ಒಂದಷ್ಟು ಸಂಬಳ ಜಾಸ್ತಿ ಆಯ್ತು. ಫ್ರೆಂಡ್ಸ್ ಕಳಿಸೋ ಮೆಸೇಜ್ ಗೆ ರಿಪ್ಲೈ ಮಾಡಿ ತಿಂಗಳುಗಳೇ ಕಳೆದು ಹೋದವು. ಅಮ್ಮ ಅಂತೂ ಹಿಂಗೆ ಕೆಲಸ ಮಾಡಿದ್ರೆ ಸತ್ತು ಹೋಗ್ತಿಯ, ಹೊತ್ತು ಹೊತ್ತಿಗೆ ಊಟ ಮಾಡು, ಆರೋಗ್ಯ ಹುಷಾರು ಅಂತ ಸಾವಿರ ಸಲ ಹೇಳಿದಾರೆ. ಆದ್ರೆ ನಾನು ಒಂದು ಸಲವೂ ಕೇಳಿಸಿ ಕೊಂಡಿಲ್ಲ… ಸಾರಿ ಮೈ ಡಿಯರ್ ಸ್ವೀಟ್ ಮಮ್ಮಿ..
ಅಂದ ಹಾಗೇ ಮತ್ತೊಂದು ವೆರಿ ಇಂಪಾರ್ಟೆಂಟ್ ವಿಷಯ ಹೇಳೇ ಇಲ್ಲ ನೋಡಿ. ಎರಡು ವರ್ಷದಿಂದ ಅನ್ಕೊಂಡಿದ್ದ ಸ್ಟುಡೆಂಟ್ ರಿಪೋರ್ಟರ್ ಪ್ರೋಗ್ರಾಮ್ ಗೆ ಅಪ್ರೂವಲ್ ಸಿಕ್ಕಾಯ್ತು.. ಥ್ಯಾಂಕ್ ಯು ರಂಗನಾಥ್ ಸರ್… ಹಂಗೂ ಹಿಂಗೂ ಪ್ರೋಗ್ರಾಮ್ ಶೂಟಿಂಗ್ ಮುಗೀತಾ ಬಂದಿದೆ. ಇನ್ನೇನು ಕೆಲವೇ ದಿನಗಳಲ್ಲಿ ಸುವರ್ಣ ನ್ಯೂಸ್ ನ ಮಧ್ಯ ಮಧ್ಯ ಸ್ಟುಡೆಂಟ್ ರಿಪೋರ್ಟರ್, ಛಲವಿದ್ದರೆ ಗೆಲುವು ನಿಮ್ಮದು ಅಂತ ಪ್ರೋಮೋ ಬರ್ತಾ ಇರುತ್ತೆ. ಅಂದ್ರೆ, ಪ್ರೋಗ್ರಾಮ್ ಶುರು ಆಗುತ್ತೆ… ಈ ಪ್ರೋಗ್ರಾಮ್ ಒಳಗೆ ಒಂಭತ್ತು ಅದ್ಭುತಗಳು ಎಂಟ್ರಿ ಕೊಟ್ಟಿವೆ. ಅದ್ರಲ್ಲಿ ಇವತ್ತು ಉಳ್ಕೊಂದಿರೋದು 6 ಅದ್ಭುತ ಮಾತ್ರ, ಹೋದ ಮೂರರಲ್ಲಿ 2 ಗಂಡು ಜೀವಗಳು, ಮತ್ತೊಂದು ಹೆಣ್ಣಾಳು. ಗಂಡು ಜೀವಗಳ ವೇಗ ಜಾಸ್ತಿ ಆಗಿ ಹೊಗೆ ಹಾಕಿಸಿಕೊಂಡರೆ, ಹೆಣ್ಣು ಜೀವ ಇಂಗ್ಲಿಷ್ ತರ ಕನ್ನಡ ಮಾತಾಡಿ ಮಾತಾಡಿ, ಆದಷ್ಟೂ ಕನ್ನಡ ಕೊಲೆ ಮಾಡಿ ಎಲಿಮಿನೆಟ್ ಆಯ್ತು… ಇನ್ನು ಉಳಿದಿರೋದು ಆರು ಮುತ್ತುಗಳು…
ಉಳಿದ ಮುತ್ತುಗಳಲ್ಲಿ ಒಂದೊಂದೂ ಒಂದೊಂದು ರೀತಿಯ ಟ್ಯಾಲೆಂಟ್ ಗಳು. ಅವರಲ್ಲೊಬ್ಬಳು ಬೆಸ್ಟ್ ಸ್ಟುಡೆಂಟ್ ರಿಪೋರ್ಟರ್ ಆಗ್ತಾಳೆ ಅಂತ ಕನಸು ಕಾಣ್ತಾ ಇದ್ರೆ, ಅವಳ್ಯಾಕೋ ಅವನ ಜೊತೆ ಬ್ಯುಸಿ ಆಗಿದಾಳೆ. ಅವಳ ಮನಸಲ್ಲಿ ಕೆಟ್ಟದಿಲ್ಲ, ಆದ್ರೆ ನೋಡೋ ಕಣ್ಣುಗಳು ಹಾಗಿಲ್ವಲ್ಲ… ಯಾವ್ದಕ್ಕೂ ಹುಷಾರು … ಅವನೋ ಯಾರ ಮಾತೂ ಕೇಳದ ಬುದ್ದಿವಂತ… ಎಲ್ಲಾ ಗೊತ್ತು ಅಂತ ತಿಳಿದಿರೋ ಚಾಲಾಕಿ ಮಾತುಗಾರ… `ಹೊಗೆ’ ಅವನ ಆಪ್ತ ಮಿತ್ರ.. ಅವನ ಮುಂದೆ ಎಲ್ಲರೂ ನಿಕೃಷ್ಟ, ಅವನು ಮಾತ್ರ ನಿಷ್ಠ-ಸ್ಪಷ್ಟ…ಆದ್ರೆ ಅವನೇ ಸ್ವಲ್ಪ ಕಷ್ಟ… ವಯಸ್ಸು ಮಾತ್ರ ಇನ್ನೂ ಹತ್ತೊಂಭತ್ತು, ನೀವು ನಂಬಲೇಬೇಕು… ಮತ್ತೊಂದು ಜೀವ ಇದೇ ಅದು ಪಕ್ಕಾ ರೂರಲ್… ಆದ್ರೆ ಹೆವಿ ಟ್ಯಾಲೆಂಟ್… ಗೊತ್ತಿಲ್ಲ ಅನ್ಕೊಂಡಿರೋ ಬುದ್ದಿವಂತ. ಅವನ ಬಾಯಲ್ಲಿ ಶಾಸಕ, ಸಾಸಕ ಆಗ್ತಾನೆ. ಆದ್ರೆ ಮುಂದೊಂದು ದಿನ ಅವನು ಮಾಧ್ಯಮದ ಪೋಷಕ ಆಗ್ತಾನೆ, ನೋ ಡೌಟ್.. ಇನ್ನು ಅವನೊಬ್ಬನಿದ್ದಾನೆ foodi boy … ವೆರೈಟಿ ವೆರೈಟಿ ತಿನ್ನೋ ಐಟಂ ಗಳು ಅವನ ಕ್ಲೋಸ್ ಫ್ರೆಂಡ್ಸ್. ಜಗತ್ತಿನಲ್ಲಿ ಯಾರಾದ್ರು ಫ್ರೂಟ್ ಬೌಲ್ ವಿತ್ ಐಸ್ ಕ್ರೀಮ್ ಜೊತೆ ಮಿಲ್ಕ್ ಶೇಕ್ ಕುಡೀತಾರ? ಇಲ್ಲ ತಾನೇ.. ಆದ್ರೆ ಇವನು ಕುಡೀತಾನೆ.. ಆದ್ರೆ ಅಷ್ಟೇ ಕಷ್ಟ ಪಡ್ತಾನೆ. ಪಕ್ಕಾ ರಿಸಲ್ಟ್ ಕೊಡ್ತಾನೆ. ಸಕ್ಕತಾಗಿ ಬರೀತಾನೆ. ಯಾರಿಗೂ ತಲೆ ಕೆಡಿಸ್ಕೊಳ್ಳದೆ, ಯಾರ್ ಏನೇ ಮಾಡ್ಕೊಂಡ್ರು ರಾತ್ರಿ 11 ಆಗ್ತಿದ್ದ ಹಾಗೇ ಗುಡ್ ನೈಟ್ ಹೇಳಿ ಮಲಗಿ ಬಿಡ್ತಾನೆ… ಪಕ್ಕಾ non sentimental ಹುಡುಗ.. ಬಟ್ ಕೆಲಸದ ಜೊತೆಗೆ ಸಕ್ಕತ್ ಸೆಂಟಿಮೆಂಟು, ಕಮಿಟ್ಮೆಂಟು… ಇನ್ನು ಅವರಿಬ್ರು ಸಾಂಸ್ಕೃತಿಕ ರಾಜಧಾನಿಯಿಂದ ಬಂದ ಜಾಣೆಯರು. ಒಬ್ಬಾಕೆಗೆ ಕಲೀಬೇಕು ಅನ್ನೋ ಹಂಬಲ. ಮತ್ತೊಬ್ಬಳಿಗೆ ಕಲ್ತೇನ್ ಆಗ್ಬೇಕು ಬಿಡು ಅನ್ನೋ ನೆಗ್ಲಿಜೆನ್ಸಿ… ಅವಳಿಗೆ ಏನಾಗುತ್ತೋ, ಹೇಗೆ ಮಾಡ್ತಿನೋ ಅನ್ನೋ ಟೆನ್ಷನ್ನು, ಮತ್ತೊಬ್ಬಳದು ಲೈಫು ಇಷ್ಟೇನೆ ಅನ್ನೋ ಡಿಸಿಷನ್ನು. ಅವಳಿಗೆ ಛೆ ಛೆ ಸರಿಯಾಗಿ ಟಾಸ್ಕ್ ಮುಗಿಸಲಿಲ್ಲ ಅನ್ನೋ ಫೀಲಿಂಗ್ ಆದ್ರೆ, ಮತ್ತೊಬ್ಬಳಿಗೆ ನಾನ್ ಸರಿಯಾಗ್ ಮಾಡ್ಲಿಲ್ಲ, ನಾನೇ ನಾಳೆ ಎಲಿಮಿನೆಟ್ ಆಗೋದು ಅನ್ನೋ ಗ್ಯಾರಂಟಿ. by the by
ಇಬ್ಬರೂ ನಮ್ಮ ಟೀಮಿನ ಫೆವರೆಟ್… ಒಟ್ನಲ್ಲಿ ಇವರೆಲ್ಲರ ಈ ಪ್ರಪಂಚದಲ್ಲಿ ನಾನು, ನನ್ನ ಗೆಳೆಯ ಮಲ್ಲಿ ತಲೆಗೆ ಹುಳ ಬಿಟ್ಕೊಂಡು ಓಡಾಡ್ತಾ ಇದೀವಿ. ಮಧ್ಯದಲ್ಲಿ ಬಂದ 103 ಡಿಗ್ರಿ ಜ್ವರ ನನಗೇನು ಮಾಡಿಕೊಳ್ಳೋಕೆ ಆಗ್ಲಿಲ್ಲ. ಮಲ್ಲಿಗೆ ಆದ ಅಲರ್ಜಿ, ಇವನ ಹತ್ರ ಇದ್ರೆ ನಾನ್ ಉದ್ದಾರ ಆಗಲ್ಲ ಅಂತ ಓಡಿ ಹೋಯ್ತು.. ಮೋಹನ ಕೈ ಮುರ್ಕೊಂಡು ನಾಳೆ ಇಂದ ನಾನ್ ಶೂಟಿಂಗ್ ಬರಲ್ಲ ಅಂತ ಹೇಳಿ ಎಸ್ಕೇಪ್ ಆದ… ಮಂಜು, ಕತ್ತು ನೋವು ಗುರು ಆಯ್ತಾ ಇಲ್ಲ ಅಂತ ಮನೆಗೆ ಹೊರಟ… ಹ್ಯಾಪಿ ನ್ಯೂಸ್ ಅಂದ್ರೆ ನಮ್ಮ ಕ್ಯಾಮರಮೆನ್ ಸುಪ್ರೀತ್ ಹುಡುಗೀರ ಜೊತೆ ಮಾತಾಡೋದು ಕಲ್ತ…ಒಟ್ಟಾರೆ, ಸ್ಟುಡೆಂಟ್ ರಿಪೋರ್ಟರ್ ಸೂಪರ್.. ಇನ್ನು ಟಿ ಆರ್ ಪಿ ಸೂಪರ್ ಆಗಿ ಬಂದ್ರೆ ಜೀವನ ಸಾರ್ಥಕ.. ಉಳಿದಿರೋ ಸ್ಟುಡೆಂಟ್ ರಿಪೋರ್ಟರ್ ಗಳಿಗೆ ನನ್ನ ಕಡೆಯಿಂದ ಆಲ್ ದಿ ಬೆಸ್ಟ್… ಇದನ್ನ ಓದಿದೋರೆಲ್ಲ ಸ್ಟುಡೆಂಟ್ ರಿಪೋರ್ಟರ್ ತಪ್ಪದೆ ನೋಡಿ. ಟಿ ಆರ್ ಪಿ ಸಕ್ಕತ್ತಾಗ್ ಬಂದ್ರೆ ಮನೆಗೆ ಬಂದು ಪಾರ್ಟಿ ಕೊಡ್ತೀನಿ. ನಿಮ್ ಕೀ ಬೋರ್ಡ್ ಮೇಲಾಣೆ..
ಸ್ಟೂಡೆಂಟ್ ರಿಪೋರ್ಟರ್…
ಅಕ್ಟೋಬರ್ 9, 2010 keerthishankaraghatta ಮೂಲಕ
ಸರ್,
ನಿಮ್ಮ ಬರವಣಿಗೆ ಶೈಲಿ ತುಂಬಾ ಖುಷಿ ಕೊಡ್ತು. ಓದುತ್ತಾ ಓದುತ್ತಾ ನನ್ನ ಆತ್ಮೀಯರೊಬ್ಬರು ಪತ್ರ ಬರೆದು ನಂಜೊತೆ ಏನೋ ಹಂಚಿಕೊಳ್ಳುತ್ತಿದ್ದಾರೆ ಎಂದೆನಿಸಿತು. ಇಂತಾ ಬರವಣಿಗೆ ಇನ್ನಷ್ಟು ಬರಲಿ. ಬ್ಲಾಗ್ ನ ‘ಕೀರ್ತಿ’ ಹೆಚ್ಚಿಸಲಿ….
ನಂಗು ಕಲಿಯೋ ಆಸಕ್ತಿ ಇದೆ ಗೊತ್ತಾ . . . ನಾನು ಈ ಫೀಲ್ಡ್ ನ ಸೀರಿಯಸ್ ಆಗಿ ತಗೊಂಡಿದಿನಿ . . anyway ನೀವು ಬರ್ದಿರದು ನಂಗೆ ತುಂಬಾನೆ ಇಷ್ಟ ಆಯಿತು 🙂
sorry boss anta saari saari kelodakke nange saadhya illa. naanu beldidde haage. “Walk like a king or don’t care that whom so ever is the king” idu nammappa nange helikotta paata. aadru kone baari sorry kelta idini. naanu yarannuu kevala anta tilidavanalla, aadre nanu tilkondidini annodu nannallide. comment madtini nija, adre iga adanna bittidini. konedagi nanu helbeku ankondirodu ishte “baduku baravagide geleya….. ilisi nadeveya e ella aapadanegaLa horeya….. kshmisibido nanna electronic media tiLisida guruvarya…”
ಇಲ್ಲಿ ಒಳ್ಳೆಯ ಟ್ರೈನಿಂಗ್ ಸಿಕ್ತು. ಜೊತೆಗೆ ಕೀರ್ತಿ ಶಂಕರಘಟ್ಟ ಅನ್ನೋ ಅದ್ಭುತ ‘ಅಬ್ರಕದಬ್ರ’ನನ್ನು ‘ಸಿಂಗ್ರಿ’ಯ ಜೊತೆ ಹತ್ತಿರದಿಂದ ನೋಡೋ ‘ಸುವರ್ಣಾ’ವಕಾಶ ದೊರಕಿತು. ಇನ್ನೆರಡು ವರ್ಷ ಬಿಟ್ಕೊಂಡು ಶಾಶಕನನ್ನು ಶಾಸಕನಾಗಿ ಸರಿ ಮಾಡ್ಕೊಂಡು ಬರ್ತೇನೆ. ರೂರಲ್ ಹುಡುಗ ಮಾಧ್ಯಮದ ಹುಡುಗನಾಗಿ ಇಲ್ಲಿರ್ತಾನೆ. ‘ಟಿವಿ’ಗೆ ಹೋಗದೇ ನಿಮ್ಮ ಸಹೋದ್ಯೋಗಿಯಾಗಿರಲು. ಇಂತಿ ನಿಮ್ಮ,
ಶಿವ್ ಪ್ರಸಾದ್(ಕೆ.ಆರ್.ಪೇಟೆ)
sorry boss ಅಂತ ಸಾರಿ ಸಾರಿ ಕೇಳೋದಕ್ಕೆ ನಂಗೆ ಸಾಧ್ಯ ಇಲ್ಲ. ನಾನು ಬೆಳ್ದಿದ್ದೆ ಹಾಗೆ. “Walk like a king or don’t care that whom so ever is the king” ಇದು ನಮ್ಮಪ್ಪ ನಂಗೆ ಹೇಳಿಕೊಟ್ಟ ಪಾಠ. ಆದರು ಕೊನೆ ಬಾರಿ sorry ಕೇಳ್ತಾ ಇದೀನಿ. ನಾನು ಯಾರನ್ನೂ ಕೇವಲ ಅಂತ ತಿಳಿದವನಲ್ಲ, ಆದ್ರೆ ನಾನು ತಿಳ್ಕೊಂಡಿದಿನಿ ಅನ್ನೋದು ನನ್ನಲ್ಲಿದೆ. comment ಮಾಡ್ತಿದ್ದೆ ನಿಜ, ಆದ್ರೆ ಈಗ ಅದನ್ನ ಬಿಟ್ಟಿದಿನಿ. ಕೊನೆದಾಗಿ ನಾನು ಹೇಳ್ಬೇಕು ಅನ್ಕೊಂಡಿರೋದು ಇಷ್ಟೇ “ಬದುಕು ಬರವಗಿದೆ ಗೆಳೆಯ….. ಇಳಿಸಿ ನಡೆವೆಯ ಈ ಎಲ್ಲಾ ಆಪಾದನೆಗಳ ಹೊರೆಯ….. ಕ್ಷಮಿಸಿಬಿಡೋ ನನ್ನ ಎಲೆಕ್ಟ್ರೋನಿಕ್ ಮೀಡಿಯಾ ತಿಳಿಸಿದ ಗುರುವರ್ಯ…”
– ಶ. ಶ. ಕ.
hey nan fnd anta heloke tumba kushi agtide kano……..realy u r a gud writer.
hey nice summary abt student reporters nd i surely’ll watch des prog…:))
thanks……
Hi Keerthi,
Nimma baravanige shaili tumba chennagide. Tumba ishta aayitu.
your writings are really impressive….i have become your fan…ill surely watch this program…
Thanks a lot Harshita… Keep visiting ma blog
hello,i am subbarao,Arkalgud working as a journalist.your writing style is impressive
hallo geleya…… nammana speedu speedu anta speedage odsbitte…. sorry anganth ankonde …but en madodu… 1st time camara face madiddu…. nange ond kade baya inond kade borring ansta ittu…realy i’m telling nan suvarna channal ge tumba tilkondidini…eglu ah bese itkondu kalitaidini ..anyway.. nange e avakasa kottidakke thanks….and ege iro nan friend’s ge all the best…..
“sneha jeevi venkat”