`ಲೋ ಮಗಾ ಒಂದ್ ಟ್ರಿಪ್ ಅರೇಂಜ್ ಮಾಡಲೇ, ಒಂದ್ ದಿನ ಆರಾಮಾಗ್ ಹೋಗ್ ಬರಣ’ ಅಂತ ಸುಪ್ರೀತ್ ಸಾವಿರ ಸಲ ಹೇಳಿದ್ದ. ನಾನೂ ಅವನಿಗೆ ಆಶ್ವಾಸನೆ ಕೊಡ್ತಾನೆ ಇದ್ದೆ. `ಆಯ್ತು ಮಗಾ, ಹೋಗಣ, ಒಂಚೂರು ಫ್ರೀ ಆಗ್ತೀನಿ. ಆಮೇಲ್ ಹೋಗಣ’ ಅಂತ ಕಾಗೆ ಹಾರಿಸ್ತಾನೆ ಇದ್ದೆ. ಆದ್ರೆ ಮೊನ್ನೆ ಭಾನುವಾರ ಹೋಗಲೇಬೇಕು ಅಂತ ನಂಗೂ ಮನಸಾಯ್ತು. ಸುಪ್ರೀತ್, ದಿವ್ಯ, ಚೇತು, ಯಶು, ರಕ್ಷಾ ಒತ್ತಾಯಕ್ಕೆ ಮಣಿದು ಜೈ ಅಂತ ಹೊರಟೇ ಬಿಟ್ವಿ. ಯಶು, ಚೇತು ಹೆಂಗಿದ್ರೂ ಮೈಸೂರಲ್ಲೇ ಇರ್ತಾರೆ. ನಾವೂ ಅಲ್ಲಿಗೆ ಹೋಗಿ ಅಲ್ಲಿಂದ ಎಲ್ಲಿಗಾದ್ರೂ ಹೋಗಣ ಅನ್ಕೊಂಡು ಸೂರ್ಯ ಹುಟ್ಟೋಕೆ ಮುಂಚೆ ಟ್ರೈನ್ ಹತ್ತಿ ಮೈಸೂರಿಗೆ ಹೊರಟೇ ಬಿಟ್ವಿ… ನಾನು, ಸುಪ್ರೀತ್, ಮಲ್ಲಿ, ದಿವ್ಯ, ರಕ್ಷಾ, ಲಕ್ಷ್ಮಣ್ ಹೀಗೆ ಆರು ಜನರ ಟೀಮು… ಹತ್ತು ಫೋಟೋ ತೆಗೆದು, 16 ಡೈಲಾಗ್ ಹೊಡೆದು, ಅವರಿವರಿಗೆ ಕಾಲೆಳಿತಾ ಇದ್ದಂಗೆ ಮೈಸೂರಲ್ಲಿ ನಮ್ ಟ್ರೇನು ಕೂ… ಅಂತ ಕೂಗ್ತಾ ಇತ್ತು. `ಯಲಾ ಇವನಾ ಮೈಸೂರ್ ಇಷ್ಟ ಹತ್ರ ಆಗೋಯ್ತಾ ‘ಅನ್ಕೊಂಡು ಅಲ್ಲೇ ನಲ್ಲೀಲಿ ಸಣ್ಣಗೆ ಬರ್ತಿದ್ದ ನೀರಲ್ಲಿ ಮುಖ ತೊಳೆದು, ಗಬ್ಬೆದ್ದ ಕರ್ಚೀಫಲ್ಲಿ ಮುಖ ಒರುಸ್ಕೊಂಡು, ಕಣ್ಣಿಗೆ ರಜನಿ ಸ್ಟೈಲಲ್ಲಿ ಗ್ಲಾಸ್ ಏರುಸ್ಕೊಂಡು ಮೈಸೂರಿನ ನೆಲದ ಮೇಲೆ ಕಾಲಿಟ್ಟೆ. ಕರ್ಮಕಾಂಡ, ಗಾಳಿ ಜೋರಾಗ್ ಬೀಸಲಿಲ್ಲ. ಮಳೆ ಬರ್ಲಿಲ್ಲ, ಮಿಂಚು ಗುಡುಗಿಲ್ಲ. ಅದು ಬರೀ ದರ್ಶನ್, ರಜನೀಕಾಂತ್, ಚಿರಂಜೀವಿ ಫಿಲ್ಮಲ್ಲಿ ಮಾತ್ರ ಅನ್ಕೊಂಡು 100 ಹೆಜ್ಜೆ ಇಡ್ತಿದ್ದ ಹಾಗೆ ನನ್ನ ಮುದ್ದು ತಂಗ್ಯವ್ವ ಯಶು ಕಾಣಿಸಿದ್ಲು. `ಅಯ್ಯೋ ಬಂಗಾರ ಎಷ್ಟು ದಿನಾ ಆಯ್ತೆ ನಿನ್ನ ನೋಡಿ’ ಅಂತ ಮನಸಲ್ಲೇ ಅನ್ಕೊಂಡು ಅವಳನ್ನ ಮಾತಾಡಿಸ್ಕೊಂಡು ರೈಲ್ವೆ ಸ್ಟೇಷನ್ನಿಂದ ಹೊರಗೆ ಬಂದ್ವಿ. ಸ್ವಲ್ಪ ಹೊತ್ತಿಗೆ ನಾವಿದ್ದ ಜಾಗಕ್ಕೆ `ಮೈಸೂರ್ ಮಿತ್ರ’ ಕೆ.ಪಿ ಬಂದ. ಅವನ ಜೊತೆ ಒಂದಷ್ಟು ಹರಟಿ ಅವನಿಗೆ ಟಾಟಾ ಮಾಡ್ತಿದ್ದ ಹಾಗೆ ಬಹು ನಿರೀಕ್ಷಿತ ಚೇತನಾ ಅಲಿಯಾಸ್ ಪುಂಗಿ ಬಂದ್ಳು. ಅವಳು ಹಚ್ಚಿದ್ದ ಫೇರ್ ಎವರ್ ವಾಸನೆ ಮೂಗಿಗೆ ಇನ್ನೂ ಹೊಡೀತಾನೆ ಇತ್ತು. ಅಷ್ಟರ ಮಟ್ಟಿಗೆ ಅವಳು ಫ್ರೆಶ್ ಆಗಿ ಟ್ರಿಪ್ ಗೆ ರೆಡಿ ಆಗಿ ಬಂದಿದ್ಲು…
ಹೋಗೋದೆಲ್ಲಿಗೆ? ಅದು ಎಲ್ಲರಿಗೂ ಕಾಡ್ತಿದ್ದ ಪ್ರಶ್ನೆ. ಸುಪ್ರೀತ ಅಷ್ಟರೊಳಗೆ ನೂರಾರು ಸಲ ಬಲಮುರಿ -ಎಡಮುರಿ ಅಂತ ಮಂತ್ರ ಜಪಿಸಿದ್ದ. ಎಲ್ಲರಿಗೂ ಆ ಜಾಗ ಓಕೆ ಅನ್ನಿಸ್ತು. ಅಲ್ಲೇ ಒಂದು ಕಾರ್ ಬಾಡಿಗೆ ಮಾಡ್ಕೊಂಡು ಹೊರಟವರಿಗೆ ಮುಂದಿನ 25 ನಿಮಿಷದಲ್ಲಿ ಬಲಮುರಿ ಫಾಲ್ಸ್ ನ ಝರಿಯ ಶಬ್ದ ಕೇಳಿಸ್ತು. ಕಾರ್ ನಿಂತ 5-10 ನಿಮಿಷದಲ್ಲಿ ಎಲ್ಲರ ಪಾದಗಳಿಗೆ ಕಾವೇರಿಯ ತಂಪು ತಾಗಿತ್ತು. ಅಷ್ಟು ಅರ್ಜೆಂಟ್ ಎಲ್ಲರಿಗೂ ನೀರಿನಲ್ಲಿ ಆಡಿ ಕುಣಿಯೋಕೆ… ಸೂಪರ್ ಅನ್ಕೊಂಡು ಮುಂದೆ ಮುಂದೆ ಹೋಗ್ತಿದ್ರೆ ನೀರಿನ ಸೆಳೆತ ಜಾಸ್ತಿ ಆಗ್ತಾ ಇತ್ತು. ಆದರೂ ನಮ್ ಹುಡುಗರ್ ಕೇಳ್ಬೇಕಾ. ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ ಅಂತ ಹೋಗ್ತಾನೆ ಇದ್ರು. ಫೈನಲಿ ಎಲ್ಲರೂ ಒಂದು ಜಾಗದಲ್ಲಿ ಹೋಗಿ ಸೆಟ್ಲ್ ಆದ್ವಿ… ನಾನು, ಸುಪ್ರೀತ್,ಮಲ್ಲಿ, ದಿವ್ಯ ಈಜು ಬರೋರು. ಇನ್ನುಳಿದವರು ಮೂಕ ಪ್ರೇಕ್ಷಕರು. ಕ್ಯಾಮರಾ ಹಿಡ್ಕೊಂಡು ಬಂದ್ರೆ ನೀರಿಗೆ ಇಳಿಯೋದು ತಪ್ಪುತ್ತೆ ಅನ್ಕೊಂಡು ಬಂದ ಯಶು ಸಹ ನಾವ್ ಆಡೋ ಆಟ ನೋಡಿ ಲಕ್ಷ್ಮಣ್ ಕೈಗೆ ಕ್ಯಾಮರಾ ಕೊಟ್ಟು ನಮ್ಮ ಜೊತೆ ಜಾಯ್ನ್ ಆದ್ಲು… ಇಷ್ಟೆಲ್ಲಾ ಆಟ ಆಡ್ಕೊಂಡು ಆರಾಮಾಗಿ ಇದ್ದ ಹೊತ್ತಿಗೆ ನನ್ನ ಮಂಗಾಟದ ತಲೆಗೇನೋ ಹೊಳೀತು ಅನ್ನೋ ತರ ನೀರಿನಿಂದ ಎದ್ದು ರಭಸದಲ್ಲಿ ಹರೀತಿದ್ದ ನೀರಿನ ಕಡೆಗೆ ಹೊರಟೆ. ನೀರಿನ ಸೆಳೆತ ಸಖತ್ತಾಗೆ ಇತ್ತು. ಹೆಂಗೇ ಅಳೆದೂ-ತೂಗಿದರೂ ನನ್ನ ತೂಕ ೫೪ ದಾಟಲ್ಲ. ಇಂತಾ ದೇಹ ಇಟ್ಕೊಂಡು ನೀರಿನ ವಿರುದ್ದ ಯುದ್ದ ಮಾಡೋನ ಹಾಗೆ ಒಂದು ಕಲ್ಲನ್ನ ಹಿಡ್ಕೊಂಡು` ಹೆಂಗೆ’ ಅಂತ ಪೋಸ್ ಕೊಡ್ತಾ ಇದ್ದೆ. ಅಷ್ಟರಲ್ಲಿ ನನ್ನ ಕೈ ಕಲ್ಲಿಂದ ಜಾರಿತ್ತು… ಎಲ್ಲಾ ನೋಡ್ತಾ ಇದ್ದ ಹಾಗೆ ನಾನು ಉರುಳ್ಕೊಂಡು ಹೋಗಿ 5-6 ಅಡಿ ಕೆಳಗಿದ್ದ ಕಲ್ಲುಗಳ ಮೇಲೆ ಪಲ್ಟಿ ಹೊಡೆದಿದ್ದೆ. ಮೇಲೆ ನೋಡ್ತಾ ಇದ್ದೋರೆಲ್ಲ `ಅನ್ಯಾಯವಾಗಿ ಹೋಗೆ ಹಾಕುಸ್ಕೊಂಡ’ ಅನ್ನೋ ತರ ನೋಡ್ತಾ ಇದ್ರು. ನಮ್ ಟೀಮ್ ಹುಡುಗರೆಲ್ಲ ಲಬೋ ಲಬೋ ಅಂತ ಬಡ್ಕೊತಾ ಇದ್ರು. ನಾನು ಎಷ್ಟ್ ಹೊಡೆತ ಬಿದ್ರು ಏನೂ ಆಗದ ತೆಲುಗು ಹೀರೋ ತರ ಅಲ್ಲಿಂದ ಮೇಲೆದ್ದೆ. ಅಷ್ಟರಲ್ಲಿ ಮೀಟರ್ ಆಫ್ ಆಗಿದ್ರೂ ನಂಗೇನೂ ಆಗಿಲ್ಲ ಅನ್ನೋ ತರ ಪೋಸ್ ಕೊಟ್ಟೆ. ಕಷ್ಟ ಪಟ್ಕೊಂಡು ನೀರಿನ ಫೋರ್ಸಿನ ವಿರುದ್ದ ಹೋರಾಡಿ ದಡ ಸೇರ್ಕೊಂಡೆ. ಆಮೇಲೂ ಸ್ವಲ್ಪ ಧೈರ್ಯ ಮಾಡಿ ಆಟ ಆಡಿದ್ದಾಯ್ತು. ಒಂದಷ್ಟು ಹೊತ್ತು ಮಂಗಾಟ ಆಡಿ ಕಷ್ಟ ಪಟ್ಕೊಂಡು ಕಾರಿನ ಹತ್ರ ಹೋಗಿ ಸೆಟ್ಲ್ ಆದ್ವಿ… ಆದ್ರೆ ನಮ್ಮ ಸುಪ್ರೀತನಿಗೆ ಇನ್ನೂ ನೀರಿನ ಚಟ ತೀರಿರಲಿಲ್ಲ. ಊಟ ಮುಗಿಸಿ ಪುಂಗಿ, ಯಶು, ಲಕ್ಷ್ಮಣ್ ಕರ್ಕೊಂಡು ಹೋದವನು ಒಂದು ಗಂಟೆ ಬಿಟ್ಟು ಬಂದ…ಅಷ್ಟರಲ್ಲಿ ನಾನು, ಮಲ್ಲಿ, ದಿವ್ಯ, ರಕ್ಷಾ ಕಾರಲ್ಲಿ ಕೂತು 2 ಪ್ಲೇಟ್ ಕಬಾಬ್ ಖಾಲಿ ಮಾಡಿದ್ವಿ. ಒಂದಂತೂ ಸತ್ಯ, ಬಹಳ ದಿನಗಳ ನಂತರ ಎಲ್ಲರೂ ಜೊತೆಯಾಗಿ ಒಂದು ಟ್ರಿಪ್ ಗೆ ಹೋಗ್ಬೇಕು ಅನ್ಕೊಂಡು ಬಂದಿದ್ದಕ್ಕೂ ಸಖತ್ ಸಮಾಧಾನ ಆಗಿತ್ತು. ಎಲ್ಲರೂ ಫುಲ್ ಖುಷ್. ಅಷ್ಟರ ಮಟ್ಟಿಗೆ ಟ್ರಿಪ್ ಸಕ್ಸಸ್.
ಅಲ್ಲಿಂದ ನೇರವಾಗಿ ಮೈಸೂರಿಗೆ ವಾಪಸ್ ಬಂದು ದಸರಾ ಎಕ್ಸಿಬಿಶನ್ ನಲ್ಲಿ ಮೂಕನ ಹಾಗೆ ಮಂಗಾಟ ಆಡಿ, ಕಿರಿಚಾಡಿ ಕೂಗಾಡಿ ಹೊರಗೆ ಬರೋದ್ರೊಳಗೆ ಗಂಟೆ ಎಂಟಾಗಿತ್ತು. ಬೆಂಗಳೂರು ನಮ್ಮನ್ನ ಕರೀತಾ ಇತ್ತು. ಹಾಗಾಗಿ ಎಲ್ಲರೂ ಆಟೋ ಹತ್ತಿ ಬಸ್ ಸ್ಟ್ಯಾಂಡ್ ತಲುಪಿದ್ವಿ. ಅಲ್ಲೀ ತನಕ ಇದ್ದ ಸಂತೋಷ ಸಡಗರ ಆ ಸ್ಥಳದಲ್ಲಿ ಮರೆಯಾಗಿತ್ತು. ಎಲ್ಲರ ಮುಖದಲ್ಲೂ ಒಂತರಾ ಬೇಜಾರು. ಬಸ್ ಹತ್ತೊದ್ರೊಳಗೆ ದಿವ್ಯ, ಚೇತನಾ ಸೇರಿ ಮುಂದಿನ ಟ್ರಿಪ್ ಪ್ಲಾನ್ ಮಾಡ್ತಾ ಇದ್ರು. ನಾನು ಮನಸಲ್ಲೇ ನಗ್ತಾ ಇದ್ದೆ. ನಾನ್ ಫ್ರೀ ಆಗ್ತಿನೋ ಇಲ್ವೋ ಅಂತ. ಆಗ್ಲೇ ಬೇಕು ಅಂತ ನಿರ್ಧಾರ ಮಾಡಿ ನನ್ನ ಮುದ್ದು ತಂಗಿಯ ಹಣೆಗೊಂದು ಮುತ್ತಿಟ್ಟು ಬಸ್ ಹತ್ತಿ ಸೀಟಿಗೊರಗಿ ಮಲಗಿದ 3 ಗಂಟೆಯಲ್ಲಿ ನನಗೆ ಕಂಡಿದ್ದು ಮತ್ತದೇ ಕಂಪ್ಯೂಟರ್ರು, ಮತ್ತದೇ ನ್ಯೂಸ್ ಡೆಸ್ಕು, ಆ ದಿನದ ಸವಿ ನೆನಪುಗಳನ್ನ ನೆನಪು ಮಾಡ್ಕೊಂಡು ಇವತ್ಯಾವ ಕೆಲಸಾನೂ ಮಾಡಲ್ಲ ಅಂತ ನನ್ನ ಕುರ್ಚಿಗೆ ತಲೆ ಕೊಟ್ಟೆ. ಮತ್ತೆ ಕಣ್ಣು ಬಿಟ್ಟಾಗ ಬೆಳಿಗ್ಗೆ 5 ಗಂಟೆ ಆಗಿತ್ತು. ಅಯ್ಯೋ ಲೇಟಾಯ್ತು ಅಂತ ಸಿಂಗ್ರಿ ರೌಂಡ್ಸ್ ಸ್ಕ್ರಿಪ್ಟ್ ಹೊಡೀತಾ ಕೂತೆ. ಆದರೂ ಮಧ್ಯ ಮಧ್ಯ ಬಲಮುರಿ ನನ್ನನ್ನ ತುಂಬಾ ಕಾಡ್ತಾ ಇತ್ತು…
Im missing them… Very Badly…
ಹೇ ಮತ್ಯಾವಾಗಾದ್ರೂ ಅಂತದ್ದೇ ಮತ್ತೊಂದು ಟ್ರಿಪ್ ನೆಪದಲ್ಲಿ ಎಲ್ಲ ಮೀಟ್ ಮಾಡೋಣ್ವಾ…? ಪ್ಲೀಸ್…
yeradu plate kabab aa??? naav onde ankond idwi :(. . naav nxt trip plan maadidiwi. . .taavu daye torsi free madkondu bandre chennag irutte. . .
Nice lines. I wish i would have with u guys. I missed a chacnce of being on in all of u. Anyways have fun.
tumba chenagide trip, nim group tumba chenagede
oho next trip bagge yochane mado astu time idiya sir nimage? good good
ಸರ್, ನಮ್ ಟೀಮ್ ಅಲ್ಲಿ ಅಷ್ಟೆಲ್ಲಾ ಮಜಾ ಮಾಡುವಾಗ ನಾನು ಇರ್ಲಿಲ್ಲ. ಬೇಜಾರಾಯ್ತು. ಮುಂದಿನ್ ಸಾರಿ ಪ್ಲೀಸ್ ಕರೀರಿ. 😦
keerthi nanenu fair ever hachkond bandirlilla gotta…. anyway neev mattondu trip bagge yochne madtidira andre nijvaglu ashcharya agtide.. bega free agi nav trip plan madidivi….
guru… hotte hursbeda….. sari next trip ge kariyodu maribeda… miss maddre singri brother dhingri ge heibekagutte….