ಮಂತ್ರಿ ಮಾಲ್ ನ ಯೂನಿವರ್ಸಲ್ ಶಾಪ್ ನಲ್ಲಿ ನೋಕಿಯಾದ ಯಾವ್ದೋ ಹೊಸ ಮೊಬೈಲ್ ನೋಡ್ತಾ ಇದ್ದೆ. ಮುಂದಿನ ಹಲ್ಲಿಗೆ ಏನೋ ಸಿಕ್ ಹಾಕ್ಕೊಂಡಿದೆ ಅನ್ನಿಸ್ತು. ನಾಲಿಗೆಯಿಂದ ಹೊರ ತೆಗೆಯೋ ಪ್ರಯತ್ನ ಮಾಡ್ದೆ. ಉಪಯೋಗ ಆಗ್ಲಿಲ್ಲ, ಹಾಗಾಗಿ ಕಿರುಬೆರಳಿನ ತೆಳು ಉಗುರಿನಿಂದ ಹಲ್ಲಿನ ಗ್ಯಾಪ್ ಗೆ ಕೈ ಹಾಕ್ದೆ. `ಓ ಮೈ ಗಾಡ್’ ಕೈಗೆ ಬಂದಿದ್ದು ನನ್ನ ಮುಂದಿನ ಹಲ್ಲಿನ ಮಧ್ಯ ಭಾಗ. ಶಿವನೆ ಶಂಭು ಲಿಂಗ. ಪಕ್ಕದಲ್ಲಿದ್ದ ನನ್ನ ಫ್ರೆಂಡ್ ಗೆ ಹಲ್ಕಿರಿದು ಕೇಳ್ದೆ ಏನಾಗಿದೆ ನೋಡು ಅಂತ. ಅವಳ ಮುಖದಲ್ಲೋ ಆಶ್ಚರ್ಯ, ಅಸಹ್ಯ! `ಅಯ್ಯೋ ಹಲ್ಲು ಮುರಿದಿದೆ ಕಣೋ ‘ ಅಂದ್ಲು. ತಕ್ಷಣ ಅಲ್ಲಿಂದ ಹೊರಟವನು ಮಲ್ಲೇಶ್ವರಂ ಕಡೆ ಬೈಕ್ ತಿರುಗಿಸ್ದೆ. ಅಲ್ಲೊಂದು ಡೆಂಟಲ್ ಕ್ಲಿನಿಕ್ ಬೋರ್ಡ್ ಕಣ್ಣಿಗೆ ಬಿತ್ತು. ಪಟ ಪಟ ಅಂತ ಓಡಿ ಹೋಗಿ ಹೆಸರು ಬರೆಸಿ ಕೂತವನಿಗೆ ಒಳಗೊಳಗೇ ತಳಮಳ,ಏನಾಗುತ್ತೋ ಅಂತ. ಅಲ್ಲಿ ಕೂತವನಿಗೆ ಸುಮ್ಮನೆ ಕೂರಲಾಗದೆ ಆ ಪುಡಿಯಾಗಿದ್ದ ಹಲ್ಲನ್ನ ಮತ್ತೆ ಅದೇ ಜಾಗಕ್ಕೆ ಸೇರಿಸಲು ಪ್ರಯತ್ನಿಸಿ ಸಕ್ಸಸ್ ಆದೆ. ಆ ಗ್ಯಾಪ್ ಫಿಲ್ ಮಾಡಿಬಿಟ್ಟಿದ್ದೆ ನಾನು. ಅದಾಗಿ 2 ನಿಮಿಷಕ್ಕೆ ಆ ತೆಳ್ಳಗಿನ ಹುಡುಗಿಯೊಬ್ಬಳು `ಬನ್ನಿ ಕೀರ್ತಿ’ ಅಂತ ಒಳಗೆ ಕರೆದಳು. ಒಳಗೆ ಹೋಗಿ ಕೂತ ತಕ್ಷಣ `ವಾಟ್ಸ್ ಯುವರ್ ಪ್ರಾಬ್ಲಂ ‘ಅನ್ನೋ ಹಾಗೆ ಮುದ್ದಾಗಿ ಕೇಳಿದಳು. ನಾನು `ಹಿಂಗಿಂಗೆ, ಹಿಂಗಿಂಗೆ, ಹಂಗಾಗಿ ನಾನ್ ಇಲ್ಲಿಗೆ ‘ ಅಂತೆಲ್ಲಾ ಹೇಳ್ದೆ. ಅವಳು ಆ ಫಿಲ್ ಆಗಿದ್ದ ಮುರಿದ ಹಲ್ಲನ್ನ ತೆಗೆಯೋಕೆ ಎಷ್ಟೇ ಪ್ರಯತ್ನ ಪಟ್ರೂ ಆಗ್ಲಿಲ್ಲ. ಒಂದು ಹತ್ತು ನಿಮಿಷ ಹೊರಗಿರಿ, ಎರಡು ಹಲ್ಲು ಡ್ಯಾಮೇಜ್ ಆಗಿದೆ 1100 ರೂಪಾಯ್ ಆಗುತ್ತೆ ಓಕೆ ನ ಅಂತ ಕೇಳಿದಳು.` ಅಯ್ಯೋ ತಾಯಿ ಖರ್ಚಿನ ಚಿಂತೆ ಬಿಡು ಮೊದಲು ನನ್ನ ಹಲ್ಲು ಸರಿ ಮಾಡು’ ಅನ್ನೋ ಹಾಗೆ ಮುಖ ನೋಡಿ ಹೊರಗೆ ಬಂದು ಕೂತು ಮತ್ತೆ ನನ್ನ ಕಿರುಬೆರಳ ಉಗುರನ್ನ ಹಲ್ಲಿನ ಗ್ಯಾಪ್ ಗೆ ಹಾಕ್ದೆ. ಮತ್ತೆ ಆ ಮುರಿದ ಹಲ್ಲು ನನ್ನ ಕೈ ಸೇರಿತ್ತು. ಸರಿ ಇನ್ನು ಮಂಗಾಟ ಬೇಡ ಅನ್ಕೊಂಡು ಹಲ್ಲನ್ನ ಕೈಲಿ ಹಿಡಿದು ಒಳಗೆ ಹೋದವನಿಗೆ ಆ ಹಲ್ ಕೀಳೋ ಚೇರ್ ಮೇಲೆ ಕೂರಕ್ ಹೇಳಿದ್ರು.
ಈಗ ಬಂದವಳು ಬೇರೆ ಹುಡುಗಿ. ಮೊದಲು ಚೆಕ್ ಮಾಡಿದವಳೇ ನೋಡಕ್ ಚೆನ್ನಾಗಿದ್ಳು. ಆದ್ರೆ ಅವಳು ಜ್ಯೂನಿಯರ್, ಅವಳೇ ಟ್ರೀಟ್ಮೆಂಟ್ ಕೊಟ್ಟಿದ್ರೆ ನನ್ನ ಹಲ್ಲು ಅಪ್ಪನಾನೆ ಸರಿ ಆಗ್ತಿರ್ಲಿಲ್ಲ ಅನ್ನೋದು ಆಮೇಲ್ ಗೊತ್ತಾಯ್ತು. ಅದೇನೇ ಇರ್ಲಿ ಈಗ ಬಂದಾಕೆ ಆಶಾ ಅಂತ ಗೊತ್ತಾಗೋಕೆ ಜಾಸ್ತಿ ಹೊತ್ತು ಬೇಕಾಗಲಿಲ್ಲ. ಈ ಆಶಾ ಬಾಳ ಬಯ್ತಾಳಪ್ಪ. ಹಲ್ಲಿಗೆ ಹತ್ತಿ, ಅದು ಇದು ಎಲ್ಲಾ ತುರುಕಿ `ಏನ್ರಿ ಬೇಗ ಬರಕ್ಕಾಗಲ್ವ, ಗಂಟೆ 9 ಆಯ್ತು. ನಾವ್ ಮನೆಗ್ ಹೋಗೋದ್ ಬೇಡ್ವ ‘ ಅಂತೆಲ್ಲಾ ಬಯ್ತಾನೆ ಇದ್ಲು. ನಾನು ಏನು ಮಾತಾಡೋ ಹಾಗೂ ಇಲ್ಲ. ನನ್ನ ಬಾಯಿಗೆ ಆಸ್ಪತ್ರೇಲಿ ಇರೋದನ್ನೆಲ್ಲ ತುರುಕಿ ಕೂರ್ಸಿದಾಳೆ. `ಆ ‘ಅಂದ್ರು ಬಯ್ತಾರೆ, `ಊ’ ಅಂದ್ರು ಬಯ್ತಾಳೆ. ಕರ್ಮ ಅನ್ಕೊಂಡು ನನ್ನ ಮೊಬೈಲ್ ನಲ್ಲಿ ಮೆಸೇಜ್ ಟೈಪ್ ಮಾಡಿ ಮಾಡಿ ಅವಳ ಜೊತೆ communicate ಮಾಡ್ದೆ. ಸರಿ ಸರಿ ಅಂತ ಅದೇನೇನೋ ಆಯುಧಗಳನ್ನ ಹಿಡ್ಕೊಂಡ್ ಬಂದ್ಲಪ್ಪ, ನನ್ ಮೀಟರ್ ಆಫ್ ಆಗಿದ್ದು ಅವಾಗ್ಲೇ. `ಆ’ ಮಾಡಿ ಅಂತ ಆ ಡ್ರಿಲ್ಲಿಂಗ್ ಮಿಶಿನ್ ನ ಬಾಯೊಳಗೆ ಹಾಕಿ ಗಿರ್ರ್ ಅನ್ಸಿದ್ಲಪ್ಪ,ಬಳ್ಳಾರಿ ಗಣಿ ನೆನಪಾಗಿ ಹೋಯ್ತು. ನೂರ್ ಲೋಕ ಕೂತ ಜಾಗದಲ್ಲೇ ನೋಡಿದ ಹಂಗಾಗಿತ್ತು ನಂಗೆ. ಆ ತಾಯಿ ಬಯ್ತಾ ಬಯ್ತಾ ನನ್ನ ಹಲ್ಲು ಕೊರೀತಾನೆ ಇದ್ಲು. ನೋವಾಗ್ತಾ ಇದ್ದೀಯ ಅಂತ ಕೇಳ್ತಾ ಕೇಳ್ತಾ `ಹೂ’ ಅಂದಾಗೆಲ್ಲ `ಸ್ವಲ್ಪ ಹೊತ್ತು ಸ್ವಲ್ಪ ಹೊತ್ತು ‘ಅಂತ ಕೊರೀತಾನೆ ಇದ್ಲು. ಕೊನೆಗೆ ಅದೇನೋ ಫೆವಿಕಾಲ್ ತರದ್ದೊಂದು ಗಮ್ ತಂದು ಸೂಜಿ ತರದ ಆಯುಧದ ತುದಿಗೆ ತಾಗಿಸಿ ನನ್ನ ಬಾಯೊಳಗೆ ತುರುಕ್ತಾ ಇದ್ಲು. ನನಗೇನು ಗೊತ್ತಾಗ್ತಾ ಇಲ್ಲ. ನನ್ನ ಬಾಯಿ, ಹಲ್ಲು ಎಲ್ಲ ಅವಳ ಕೈಗೆ ಕೊಟ್ಟು ಶಸ್ತ್ರ ದಾನ ಮಾಡಿದವನ ಹಾಗೆ ಕೂತಿದ್ದೆ. ಒಂದು ಗಂಟೆ ಸರ್ಕಸ್ ಮಾಡಿ ಬಾಯಿಗೆ ತುರುಕಿದ್ದ ಗುಜರಿ ಐಟಂ ಎಲ್ಲ ಹೊರಗ ತೆಗೆದ್ಲಪ್ಪ. ನಂಗೆ ಅವಾಗ್ಲು ಬಾಯ್ ಮುಚ್ಚೋಕ್ ಆಗ್ತಿಲ್ಲ. ಅಷ್ಟು ಹೊತ್ತು ಬಾಯಿ ತೆರೆದಿಟ್ಟಿದ್ದರ ಪರಿಣಾಮ ಅದು. ಇಷ್ಟೆಲ್ಲಾ ಮುಗಿಯೋದ್ರೊಳಗೆ ಗಂಟೆ ಹತ್ತಾಗಿತ್ತು. ಎರಡು ಹಲ್ಲಿಗೂ ಫಿಲ್ಲಿಂಗ್ ಮಾಡಿ, ಬೆಳಿಗ್ಗೆ ಬನ್ನಿ ಪಾಲಿಶ್ ಮಾಡ್ತೀನಿ. ಜಾಸ್ತಿ ಮಾತಾಡಬೇಡಿ, ಸಾಂಬಾರ್ ತಿನ್ಬೇಡಿ, ಓನ್ಲಿ ಮೊಸರನ್ನ ಅಂತೆಲ್ಲ ವಾರ್ನಿಂಗ್ ಮಾಡಿ ಕಳ್ಸಿದ್ಲು. ಸರಿ ತಾಯಿ ಅನ್ಕೊಂಡು ಆಫೀಸಿಗೆ ಹೋದೆ.
ಮಾರನೆ ದಿನ ಬೆಳಗ್ಗೆ ಮತ್ತೆ ಅವಳ ಹತ್ರ ಹೋಗಿ ಕೂತೆ. ಸರಿ ಕೂತ್ಕೊಳಿ ಅಂತ ಹೇಳಿ ಮತ್ತೆ ಈಗ ಡ್ರಿಲ್ಲಿಂಗ್ ಮಿಶಿನ್ ತರದ್ದೇ ಪಾಲಿಶ್ ಮಿಶಿನ್ ತಗೊಂಬಂದು ಹಲ್ಲನ್ನ ಪಾಲಿಶ್ ಮಾಡ್ತಾ ಇದ್ರೆ ನಂಗೆ ನಮ್ ಮನೆ ಕಟ್ಟಬೇಕಾದರೆ ಟೈಲ್ಸ್ ಪಾಲಿಶ್ ಮಾಡ್ತಾ ಇದ್ದಿದ್ದು ನೆನಪಾಗ್ತಾ ಇತ್ತು. ತಾಯಿ, ಒಂದರ್ಧ ಗಂಟೆ ಒಳಗೆ ಮಿಶಿನ್ ನಲ್ಲಿ ಮಾಡಿದ ಪಾಲಿಶ್ ಮುಗಿಸಿ ಸಾಲ್ಟ್ ಪೇಪರ್ ತರದ ವಸ್ತು ಏನನ್ನೋ ತಂದು ಹಲ್ಲಿಗೆ ಹಾಕಿ ತಿಕ್ತಾ ಇದ್ರೆ ನಂಗೆ ನನ್ನ ಹಲ್ಲಿನ ಮೇಲೆ ನಖಶಿಖಾಂತ ಕೋಪ ಉಕ್ಕುತಾ ಇತ್ತು. ಹೆಂಗೋ ಅಷ್ಟೆಲ್ಲ ಪ್ರಯತ್ನದ ಫಲವಾಗಿ ಅವಳು ನನ್ನ ಕೈಗೆ ಕನ್ನಡಿ ಕೊಟ್ಟು` ನೋಡ್ಕೊಳಿ’ ಅಂದಾಗ ನನ್ನ ಹಲ್ಲು ಮೊದಲಿನ ಹಾಗೇ ಆಗಿತ್ತು ಅನ್ನೋದಷ್ಟೇ ಸಮಾಧಾನದ ವಿಚಾರ.
ಇಷ್ಟೆಲ್ಲಾ ಚೆನ್ನಾಗಿ ಸರಿ ಮಾಡಿದಾಳೆ. ಮೊದಲೇ ನನ್ನ ಹಲ್ಲಿನ ಸಮಸ್ಯೆ ಜಾಸ್ತಿ. ಎಲ್ಲಾ ಹಲ್ಲೂ ಸರಿ ಮಾಡ್ಸಿ ಬಿಡೋಣ ಅನ್ಕೊಂಡು ಟೋಟಲ್ ಪ್ಯಾಕೇಜ್ ಲೆಕ್ಕದಲ್ಲಿ ಎಷ್ಟ್ ಖರ್ಚಾಗ್ಬೋದು ಹೇಳ್ತೀರಾ ಅಂದೇ. ಫುಲ್ ಕುಶೀಲಿ ಅವರ ಸೀನಿಯರ್ ಮೇಡಂ ಒಬ್ಬರನ್ನ ಕರೆದು ಮೇಡಂ `ಯಾವ್ದೋ ಕುರಿ ಕಡೀರಿ’ ಅನ್ನೋ ಹಾಗೇ ನನ್ನ ಹಲ್ಲುಗಳನ್ನ ತೋರ್ಸಿದ್ಲು. ಅವರೂ ಎಲ್ಲಾ ನೋಡಿ ಮತ್ತೊಬ್ಬ ಬ್ಯೂಟಿಫುಲ್ ಹುಡುಗಿ ಕೈಲಿ ಎಲ್ಲ ಸೇರಿ ಎಷ್ಟಾಗುತ್ತೆ ಅಂತ ಬರೆದು ಕಳ್ಸಿದ್ರು. 2 ಹಲ್ಲು ರೂಟ್ ಕೆನಲ್, 3 ಫಿಲ್ಲಿಂಗ್, 2 ಬ್ರಿಡ್ಜ್, 5 ಕ್ಯಾಪ್ ಎಲ್ಲಾ ಸೇರಿ 28 ರಿಂದ ಮೂವತ್ತು ಸಾವಿರ!!!! ಎಲ್ಲ ತೆಗ್ಸಿ ಸೆಟ್ ಹಾಕಿಸಿ ಬಿಡೋಣ ಅನ್ನೋ ಅಷ್ಟು ಕೋಪ ಬಂದಿತ್ತು. ಆದರೂ ನನ್ನ ಹೆಂಡತಿ ಆಗೊಳನ್ನ ನೆನಸ್ಕೊಂಡು ಇವತ್ತಲ್ಲ ನಾಳೆ ಮಾಡ್ಸಿದ್ರಾಯ್ತು ಅನ್ಕೊಂಡು ಅಲ್ಲಿಂದ ಕಾಲು ಕಿತ್ತೆ. ನನ್ನ ಜೊತೆಗೆ ಬಂದಿದ್ದ ನನ್ನ ಫ್ರೆಂಡ್ ರವಿ,` ಏನಣ್ಣ, ಒಂದು ತಿಂಗಳ ಸಂಬಳ ಪೂರ್ತಿ ಹಲ್ಲು ರೆಡಿ ಮಾಡ್ಸೋಕೆ ಬೇಕಲ್ಲ’ ಅಂತ ರೇಗಿಸ್ತಿದ್ದ. ನಾನು ರೆಡಿಯಾದ ಹಲ್ಲನ್ನ ನಾಲಿಗೆಯಲ್ಲಿ ಸವರುತ್ತಾ , ಎಲ್ಲ ನಿನ್ನಿಂದಾನೆ ಆಗಿದ್ದು ಅಂತ ಶಾಪ ಹಾಕ್ತಾ ಇದ್ದೆ. ಈಗ ಮನಸ್ಸಿನೊಳಗೆ ಒಂದೇ ಪ್ರಶ್ನೆ, ` 30 ಸಾವಿರ ಕೊಟ್ಟು ಹಲ್ಲು ಸರಿ ಮಾಡಿಸಬೇಕಾ?’
ಇರಲಾರದೆ ಇರುವೆ ಬಿಟ್ಕೊನ್ ಡ್ರೆ ಇನ್ನೇನ್ ಆಗುತ್ತೆ ಹೇಳಿ. ಕೈ ಕೆಲಸ ಜಾಸ್ತಿ ಆಯ್ತು ಅನ್ಸುತ್ತಪ್ಪ ನೋಡಿ ಎನ್ಮಡ್ತಿರಾ..
ಮಾಡ್ಸಿ ಸಾರ್ 🙂 ಬ್ಯಾಚುಲರ್ ಲೈಫಲ್ಲೇ ಅಜ್ಜ ಆಗೋದು ಬೇಡ!!!
thats true… but my fate… what to do
super article keerti fine…….
Thank u sir
ನನ್ ಸಮಸ್ಯೇನೂ ಅಷ್ಟೇನೂ ಭಿನ್ನವಿಲ್ಲ.
ನಾನೂ ದಂತ ಭಗ್ನಕ್ಕೆ ಅಣಿಯಾದೆ.
ಸುಂದರ ಹುಡುಗಿಯರ ಕೈಯಲ್ಲಿ ಡ್ರಿಲ್ಲಿಂಗ್ ಮಿಷಿನ್ ನೋಡಿ…
ಸಾಕಪ್ಪ ಸಾಕು… ಅಂತ ಅಲ್ಲಿಂದ ಕಾಲ್ಕಿತ್ತೆ…
ಇನ್ನು ನಿಮ್ಮ ಪ್ರಶ್ನೆಗೆ ಉತ್ತರ
ನಿಮ್ಮನ ಮದುವೆ ಆಗೋ ಕನ್ಯೆಯೇ ಹೇಳಬೇಕೋ..
ನಿಮ್ಮ ಕತೆ ತುಂಬಾ ಚೆನಾಗಿದೆ ಸರ್. ಈಗ್ಲೆ ಹಲ್ಲು ಸರಿ ಮಾಡಿಸ್ಬೇಡಿ. ನಮ್ಮ ಮೇಡಂ (ನಿಮ್ಮ ಭಾವಿ ಪತ್ನಿ) ಯವರ ಅನುಮತಿ ಪಡೆದು ಮಾಡ್ಸಿ… ಅವ್ರು ಮುನಿಸಿಕಂಡ್ರೆ ತುಂಬಾ ತೊಂದರೆಯಾಗುತ್ತೆ ಅದಿಕ್ಕೆ ಹೇಳ್ದೆ ಅಷ್ಟೆ. ನಿಮ್ಮ ಎಲ್ಲಾ ಲೇಖನಗಳು ಚೆನಾಗಿದೆ ಸರ್…
Thak u kusuma… Keep visiting
sharanu sir… sharanu… nodona yenenaagutte?
KEERTHI YENE HELO. IVATTE FRIST NINNA BLOG ODIDDU. MATADO STYLU AAMELE KATHE BAREDA STYLU YERADU SUPER. ALL THE BEST. GO AHEAD. INTHADDE REETHI BARI. SUPER ARTICALE.
Thanks dear….