ಯಾವತ್ತೂ ರವಿಚಂದ್ರನ್ ಸರ್ ಸಿನಿಮಾನ ಮನಸಾರೆ ಮೆಚ್ಚಿದವನಲ್ಲ ನಾನು. ಆಗಾಗ ಟಿವಿಯಲ್ಲಿ ನೋಡೋ ಅವರ ಅವತ್ತಿನ ಸಿನಿಮಾ ಬಿಟ್ರೆ ನನಗೆ ಬುದ್ದಿ ಬಂದ ಮೇಲೆ ಅವರ ಸಿನಿಮಾಗಳನ್ನ ಥಿಯೇಟರ್ ನಲ್ಲಿ ನೋಡಿ ವಾರೆವ್ಹಾ ಅಂತ ನನ್ನ ಬಾಯಲ್ಲಿ ಯಾವತ್ತೂ ಬಂದಿಲ್ಲ. ಆದ್ರೆ ಇವತ್ತು ಘಂಟಾಘೋಷವಾಗಿ ಹೇಳುತ್ತೇನೆ. ನಾನು ರವಿ ಸರ್ ಫ್ಯಾನ್..! ಅವರಿಗೆ ಅವರು ಮಾತ್ರ ಸಾಟಿ. ಈಗ ತಾನೇ ಅವರ `ದೃಶ್ಯ’ ನೋಡಿ ಬಂದೆ. ದೃಶ್ಯದ ಒಂದೊಂದು ದೃಶ್ಯವೂ ಸೂಪರ್ ಸೂಪರ್..!
ಪ್ರತಿ ಕ್ಷಣವೂ ನಿಮ್ಮನ್ನು ನೋಡಿಸಿಕೊಂಡು ಹೋಗುವ ಸಿನಿಮಾ, ಪ್ರತಿ ಪಾತ್ರಗಳೂ ಮನಸ್ಸಲ್ಲಿ ಉಳಿಯೋ ಸಿನಿಮಾ, ಎಲ್ಲೂ ಬಂಡಲ್ ಅಂತ ಅನ್ನಿಸದೇ ಇರೋ ಸಿನಿಮಾ, ಸಿನಿಮಾ ಮುಗಿದಾಗ ಇಷ್ಟು ಬೇಗ ಮುಗೀತಾ ಅಂತ ಅನ್ನಿಸೋ ಸಿನಿಮಾ… ಅದು `ದೃಶ್ಯ’.. ಪ್ರತಿಯೊಬ್ಬರೂ ನೋಡಲೇಬೇಕಾದ ಸಿನಿಮಾ. ರೀಮೇಕ್ ಇರಬಹುದು ಆದ್ರೆ ರವಿ ಸರ್ ಅಭಿನಯ ಸಿನಿಮಾ ನಮ್ಮದೇ ಸ್ವಂತದ್ದು ಅನ್ನುವಷ್ಟರ ಮಟ್ಟಿಗೆ ನಿಮ್ಮ ಮನಸ್ಸಲ್ಲಿ ಕೂತು ಬಿಡುತ್ತೆ. ಕಥೆ ಬರೆದವರಿಗೆ ನೂರು ಸಲಾಂ, ಕನ್ನಡಕ್ಕೆ ತಂದ ಪಿ.ವಾಸುರವರಿಗೆ ಸಾವಿರ ಸಲಾಂ, ಆರಂಭದಿಂದ ಅಂತ್ಯದವರೆಗೂ ನಮ್ಮನ್ನು ಕಾಡುವಂತೆ ಅಭಿನಯಿಸಿ ಹಿಂದಿನ ಎಲ್ಲ ರವಿಚಂದ್ರನ್ ಮರೆಯೋ ಹಾಗೆ ಮಾಡಿದ ರವಿ ಸರ್ ಗೆ ಕೋಟಿ ಕೋಟಿ ಸಲಾಂ…
ಕನ್ನಡದಲ್ಲಿ ರವಿಚಂದ್ರನ್ ಮಾಡಲಿ ಅಂತಾನೇ ಮಲಯಾಳಂನಲ್ಲಿ ಈ ಸಿನಿಮಾ ಬಂದಿದೆ ಅಂತ ಹೇಳಿದ್ರೆ ಅದು ಅತಿಶಯೋಕ್ತಿ ಅಲ್ಲ.! ಕನ್ನಡದಲ್ಲಿ ಒಳ್ಳೆ ಸಿನಿಮಾ ಬರಲ್ಲ ಅಂತಾ ಹೇಳೋ ಕನ್ನಡ ಚಿತ್ರ ವಿರೋಧಿ ಮೂದೇವಿಗಳೇ ಹೋಗಿ `ದೃಶ್ಯ’ ನೋಡಿಬನ್ನಿ. ಇಲ್ಲೂ ತಪ್ಪು ಕಂಡ್ರೆ ಮೊಸರಲ್ಲಿ ಕಲ್ಲು ಹುಡುಕೋರು ನೀವು. ರವಿ ಸರ್ ನಮ್ಮ ಚಾನಲ್ ಸ್ಟೂಡಿಯೋಗೆ ಬಂದಾಗ 3-4 ಸಲ ನೋಡಿದೀನಿ. ಯಾವತ್ತೂ ಜೊತೇಲಿ ಫೋಟೋ ಹೊಡಿಸ್ಕೋಬೇಕು ಅಂತ ಅನ್ಸಿರ್ಲಿಲ್ಲ. ಆದ್ರೆ ಈಗ ಇಂತಹ ಫೆಂಟಾಸ್ಟಿಕ್ ನಟನ ಜೊತೆ ಒಂದು ಫೋಟೋ ತೆಗೆಸಿಕೊಳ್ಳೋ ಮನಸಾಗಿದೆ. ಅದ್ಯಾವತ್ತಾದ್ರೂ ಒಂದು ದಿನ ಆಗುತ್ತೆ ಬಿಡಿ…!
ರವಿ ಸರ್, ಪ್ರೇಮಲೋಕ ಆ ಕಾಲಕ್ಕೆ, ರಣಧೀರ ಮುಗಿದ ಕಥೆ, ಇನ್ಯಾವತ್ತೂ ಪ್ರೀತ್ಸೋದ್ ತಪ್ಪಾ ಅಂತ ಕೇಳಬೇಡಿ. ಇಂತಹ ಸ್ಕ್ರಿಪ್ಟ್ ಓಕೆ ಮಾಡಿ ಆಕ್ಟ್ ಮಾಡಿ… ನೀವು ನಂಗೆ ಕ್ರೇಜಿ ಸ್ಟಾರ್ ಆಗಿ ಇಷ್ಟ ಆಗಿರ್ಲಿಲ್ಲ. ಆದ್ರೆ ಫ್ಯಾಮಿಲಿ ಸ್ಟಾರ್ ಆಗಿ ಸಖತ್ ಇಷ್ಟ ಆಗಿದ್ದೀರಿ. ಸ್ನೇಹಿತರೇ, ರವಿ ಸರ್ ಈ ಸಿನಿಮಾದಲ್ಲಿ ದ್ರಾಕ್ಷಿ ಹಣ್ಣನ್ನು ಹೊಕ್ಕಳ ಮೇಲೆ ಆಡಿಸಿಲ್ಲ, ಹೂವಿನ ಹಾಸಿಗೆ ಮೇಲೆ ಹಾರಿಲ್ಲ, ಹೀರೋಯಿನ್ ಜೊತೆ ಫಾರಿನ್ ಹಾಡಲ್ಲಿ ಕುಣಿದಿಲ್ಲ… ನೀವು ಕೊಟ್ಟ ಕಾಸಿಗೆ ನೂರಕ್ಕೆ ಇನ್ನೂರು ಪರ್ಸೆಂಟ್ ನಾನು ಗ್ಯಾರಂಟಿ… ಇವತ್ತೇ ದೃಶ್ಯ ಸಿನಿಮಾ ನೋಡಿ. ನೀವೂ ರವಿ ಸರ್ ಫ್ಯಾನ್ ಆಗ್ತೀರ…!
ನಿಮ್ಮದೊಂದು ಉತ್ತರ