ಹತ್ತತ್ರ 2 ತಿಂಗಳೇ ಕಳೀತು, ನಾನು ನನ್ನ ಬ್ಲಾಗ್ ನಲ್ಲಿ ಏನಾದರೂ ಗೀಚಿ. ಇತ್ತೀಚಿಗೆ ಸ್ವಲ್ಪ ಬ್ಯುಸಿ ಆಗ್ಬಿಟ್ಟಿದೆ ಜೀವನ. ಈ ಮೀಡಿಯಾನೇ ಹಿಂಗೆ ಬಿಡಿ. ಎಷ್ಟು ಮಾಡಿದರೂ ಮುಗಿಯದ ಕೆಲಸ, ತೀರದ ಹಸಿವು. ಸರಿ ಸರಿ ಈ ಎರಡು ತಿಂಗಳಲ್ಲಿ ಏನೆಲ್ಲಾ ಆಗೋಯ್ತು ಅಲ್ವ? ಸಕ್ಕತ್ತಾಗಿ ಗೋಳಾಡಿಸಿದ ವರ್ಷ ಕಳೆದೆ ಹೋಯ್ತು. ಹೊಸ ವರ್ಷಾಚರಣೆ ಈ ಸಲ ಆಫೀಸ್ ನಲ್ಲೆ ಕಳೆದು ಹೋಯ್ತು. ಎಲ್ಲಾ ಸಂಭ್ರಮದಿಂದ ಕುಣೀತಾ ಇದ್ರೆ ನಾನು ಸ್ಪೆಷಲ್ ಪ್ರೋಗ್ರಾಮ್ ನಲ್ಲಿ ಸಿಕ್ಕಾಪಟ್ಟೆ ಬ್ಯುಸಿ ಆಗ್ಬಿಟ್ಟಿದ್ದೆ… ಆದ್ರೂ ಚೆನ್ನಾಗಿತ್ತು ಬಿಡಿ. . ಅಂದ ಹಾಗೆ ಹೊಸ ವರ್ಷದಲ್ಲಿ ಏನೇನೋ ಅನ್ಕೊಂಡಿದಿನಿ. ಆಗುತ್ತೋ ಬಿಡುತ್ತೋ ಸೆಕೆಂಡರಿ, ಆದ್ರೂ ಪ್ರಯತ್ನ ಅಂತೂ ಮಾಡಲೇ ಬೇಕಲ್ವ..? ನನ್ನ ಮುಂದಿರೋ ಮೊದಲ ಕನಸು ಅಪ್ಪ ಅಮ್ಮನ್ನ ಬೆಂಗಳೂರಿಗೆ ಕರ್ಕೊಂಡು ಬಂದು ನಂ ಜೊತೇಲೆ ಇಟ್ಕೋಳೋದು. ಇನ್ನೇನು ತಂಗಿಯ ಮದುವೆ ದಿನಗಳು ಹತ್ತಿರ ಆಗ್ತಿವೆ. ಅವಳಿಗೂ ನಂ ಜೊತೆ ಒಂದಷ್ಟು ದಿನ ಖುಶಿಕ್ಹುಸಿಯಾಗಿ ಇರ್ಬೇಕು ಅನ್ನೋ ಆಸೆ. ನಂಗೂ ೩ ಹೊತ್ತೂ ಹೋಟೆಲ್ ಊಟ ಮಾಡಿ ಸಾಕಾಗಿ ಹೋಗಿದೆ. ನಿಸರ್ಗ, ಪರಿಸರ ಅಂದ್ರೆ ವಾವ್ ಅಂತಿದ್ದೆ. ಈಗ ನಿಸರ್ಗ ಅಂದ್ರೆ ವ್ಯಾಕ್ ಅನ್ನೋ ಹಾಗಾಗಿದೆ. ಯಾಕೆ ಅಂದ್ರ..? ನಮ್ ಆಫೀಸ್ ಪಕ್ಕದಲ್ಲಿರೋ ಹೋಟೆಲ್ ಹೆಸರು ನಿಸರ್ಗ. 3 ವರ್ಷದಲ್ಲಿ ಕನಿಷ್ಠ 2 ಕ್ವಿಂಟಾಲ್ ಫುಡ್ ಆ ಹೋಟೆಲ್ಲಲ್ಲೇ ತಿಂದಿರೋದು. ಸಕತ್ ಕಾಸ್ಟ್ಲಿ, ಆದ್ರೂ ಅನಿವಾರ್ಯ. ದಿನಕ್ಕೆ 100 ರುಪಾಯ್ ಅನ್ಕೊಂಡ್ರೂ 3 ವರ್ಷದಲ್ಲಿ 1 ಲಕ್ಷ ರುಪಾಯ್ ಊಟಕ್ಕೆ ಹಾಕಿದಿನಿ. ಅದೇ ದುದ್ದಿದ್ದಿದ್ರೆ ನ್ಯಾನೋ ಕಾರ್ ಆದ್ರೂ ತಗೊಬಹುದಿತ್ತು… 😦 ಪುಕ್ಷಟ್ಟೆ ಕೊಟ್ರೂ ನಾನದನ್ನ ತಗೋಳಲ್ಲ ಬಿಡಿ… )ಎನಿವೇ ಹಸಿದಾಗ ಅನ್ನ ಹಾಕಿದ ಆ ನಿಸರ್ಗಕ್ಕೂ ನನ್ನದೊಂದು ಥ್ಯಾಂಕ್ಸ್…
ಕೆಲವು ಗೆಳೆಯರು ಕಾಮೆಂಟ್ ಹಾಕ್ತ ಇರ್ತಾರೆ, ಏನಾದ್ರೂ ಬರಿ ಗುರು ಅಂತ. ಬರೀಬೇಕು ಅನ್ಕೊಂಡು ಕೂರ್ತೀನಿ, ಬರುದ್ರಾಯ್ತು ಬಿಡು ಅಂತ ಸುಮ್ನಾಗ್ತಿನಿ. ಕೆಲಸದಲ್ಲಿರೋ ಹುರುಪು ಈ ಬರೆಯೋದರಲ್ಲಿ ಯಾಕ್ ಬರಲ್ಲ ಅಂತ. ನನ್ನ ಹುಡುಗಿ ಕೈ ಕೊಟ್ಟು ಹೋದಾಗ ದಿನಾ ಕೂತ್ಕೊಂಡು ಪೇಜ್ ಗಟ್ಟಲೆ ಬರೀತಿದ್ದೆ. ಈಗ ನಾನ್ನದೆ ಸೂಪರ್ ಅನುಭವಗಳನ್ನ ಬರೆಯೋಣ ಅಂದ್ರೆ ಅದನ್ನ ಎಂಜಾಯ್ ಮಾಡೋಕೆ ಟೈಮ್ ಇಲ್ಲ, ಇನ್ನು ಬರೆದು ಗುಡ್ಡೆ ಹಾಕೋದು ಯಾವಾಗ…? ಎನಿವೇ.. ಹೊಸ ವರ್ಷದ ಪ್ಲಾನ್ ಗಳ ಬಗ್ಗೆ ಹೇಳ್ತಿದ್ದೆ ಅಲ್ವ…? ನಂಗೆ ಒಂದು ವಿಚಿತ್ರ ಚಟ ಇದೆ, ಈ ಬೆಸ್ಟ್ ದಿನಾಂಕಗಳ ದಿನ ಏನಾದ್ರೂ ಮಾಡೋದು, ಏನಾದ್ರೂ ತಗೋಳೋದು.. ಹೀಗೆ… ನಾನ್ ಹುಟ್ಟಿದ್ದು, 8-6-86, ಮನೆ ಕಟ್ಟಿದ್ದು ೦08-08-08, 09-09-09 ಗೆ ಜೀವನ ಬರ್ಬಾದಾಗಿತ್ತು, 10-10-10 ಕ್ಕೆ ಏನೂ ಮಾಡಕ್ಕಾಗಿಲ್ಲ, ಸೋ 11-11-11 ಕ್ಕೆ ಮೂರು ಪ್ಲ್ಯಾನ್ ಇದೆ. ತಂಗಿ ಮದುವೆ ಮಾಡೋದು, ಪುಟ್ಟದೊಂದು ಕಾರ್ ತಗೋಳೋದು ( ನ್ಯಾನೋ ಅಲ್ಲ), ನನ್ ಹುಡುಗಿ ಮನೇಲಿ ಕಿರಿಕ್ ಆದ್ರೆ ರಿಜಿಸ್ಟರ್ ಮ್ಯಾರೇಜ್ ಆಗೋದು.!!! ಇವೆಲ್ಲಾ ಆಗ್ಲಿ ಅಂತ ಪ್ಲೀಸ್ ಬೇಡ್ಕೊಬೇಕು ನೀವೆಲ್ಲ… ಪ್ಲಾನ್ಸ್ ಹೇಳಿದೀನಿ. .. ನಿಮಗೆ ಏನನ್ಸುತ್ತೋ ಹೇಳ್ರಪ್ಪ… ಯಾರು ಮಕ್ಕುಗೀಬೇಡಿ, ಆಡೋ ವಯಸ್ಸು ಮದುವೆ ಯಾಕೋ ಅಂತ… ಅದು ನಂಗೂ ಅರ್ಥ ಆಗುತ್ತೆ, ನನ್ನಮ್ಮ, ನನ್ ಹುಡುಗಿ ಇಬ್ರಿಗೂ ಅರ್ಥ ಆಗಲ್ಲ. ಯಾವತ್ತೋ ಆಗೋದು, ಆಗಿ ಹೋಗ್ಲಿ ಬಿಡಿ… ನಮಗೆ ಮದುವೆ ಆದ್ರೂ ಒಂದೇ, ಆಗದೆ ಇದ್ರೂ ಒಂದೇ… ಜೀವನ, ಜೀವನ ಶೈಲಿ ಸ್ವಲ್ಪಾನೂ ಬದಲಾಗಲ್ಲ… ನಾಯಿ ಬಾಲಕ್ಕೆ ದೆಬ್ಬೆ ಕಟ್ಟಿದ್ರೆ ಬಾಲ ನೆಟ್ಟಗಾಗುತ್ತಾ.? ನೋ ಚಾನ್ಸ್.. ನಿಮಗೂ ನಾನ್ ಹೇಳೋದಿಷ್ಟೇ… ಇರೋ ಅಷ್ಟು ದಿನ ಲೈಫ್ ಎಂಜಾಯ್ ಮಾಡಿ… ನಾಳೆ ಹೇಗಿರುತ್ತೋ ಯಾವನಿಗ್ ಗೊತ್ತು… ಬಿ ಹ್ಯಾಪಿ…
sir, nenne thane helde nim blog bagge…. evathu nodi kushi aythu… nomma kannasela adastu bega yavude tondre elde nanasagli… olle car tagoli, thangi maduve madi, nimma snehitara jothe , nimma abhimanigalu nim jothe ne erthare…
adastu bega appa amma na karkond banni, adre ee kolaku rajakeeya dinda doora edi… mane oota madi, naanu nisarga dali ondsalla try madbeku ansthaide? deshake kelasa madi… deshada abhivruddi ge kelasa madi…. mathe nanna nimma beti mundina blog nalli…..
ranganath (sr n jr) sir na, gowrish sir na, ajith sir na, prathima bhat madam na thumba kelde antha heli… nanu evra thumba dodda abhimani…..
singri time na swalpa jasti madi (5min to 10 min)(sadhya adre, dayavittu)
jaihind
ಏನ್ ಕೀರ್ತಿ ಸಾಹೇಬ್ರೆ, ೨೦೧೧ ಗೆ ತುಂಬಾ ಪ್ಲ್ಯಾನ್ಸ್ ಇವೆ. ಆ ದೇವರು ನಿಮ್ಮ ಆಸೆಗಳನ್ನೆಲ್ಲ ಈಡೇರಿಸಲಿ. ಹಾ…ಇನ್ನು ತಂಗಿ ಮದುವೆ ಬಗ್ಗೆ ಮಾತಾಡಿದ್ರಿ, ಅದರ ಜೊತೆ ನೀವೂ ಮದುವೆ ಆಗೋ ವಿಷ್ಯಾ ಮಾತಾಡಿದ್ರಿ, ಆದ್ರೆ, ಯಾವ ಹುಡುಗಿ ಅಂತಾ ತಿಳಿಸಿಲ್ಲ. ಪ್ಲೀಜ್ ನಾವು ನಮ್ಮ ಅತ್ತಿಗೇನಾ ನೋಡ್ಬೇಕು…ಅವರ ಬಗ್ಗೆ ಒಂಚೂರು ಬರೀರಲ್ಲಾ… ಇನ್ನೋಂದು ವಿಷ್ಯಾ, ನೀವು ಹುಟ್ಟಿದ್ದು ೮-೬-೮೬ ಅದೇ ರೀತಿ ನಾನು ಹುಟ್ಟಿದ್ದು ೬-೬-೮೬. ಸೋ ಐ ಎಮ್ ಎಲ್ಡರ್ ದ್ಯಾನ್ ಯು ಹಾ ಹಾ ಹಾ ಹಾ ಹಾ… ಜಸ್ಟ್ ತಮಾಸೆ ಮಾಡ್ದೇ … ಬೇಜಾರಾಗ್ಬೇಡಿ. ನಿಮ್ಮ ಕನಸು ಈಡೇರಲಿ ಅಂತಾ ಹಾರೈಸ್ತೇನಿ… ನಿಮ್ಮ ರೈಟಿಂಗ್ ಶೈಲಿ ತುಂಬಾ ಇಷ್ಟಾ ಆಯ್ತು…. ಟೇಕ್ ಕೇರ್ …
hey huduga,
I wish You all the success in your life kano.. 🙂
All the best Keerthi Sir…
all the best anna
Infantry road Nisargana?
2 ಕ್ವಿಂಟಾಲ್ ಫುಡ್ ತಿಂದ್ರಾ? ಎಲ್ಲ ಎಲ್ಲಿ ಹೋಗಿದೆ ಸರ್? ಇನ್ನ ಹಾಗೆ ಇದೀರಲ್ಲ? ೧೦ ಕಿಲೋಗ್ರಾಂ ಆದರೂ ಜಾಸ್ತಿ ಆಗಿರ್ಬೇಕಿತ್ತಲ್ವ? ಬರೀ ಗಾಳಿ ಸೇವನೆನಾ?
ಅದು ಇರ್ಲಿ ಸಾರ್, ನಾನೋ ಕಾರ್ ಬಗ್ಗೆ ಯಾಕೆ ಈ ಪರಿ ಅಸಮಧಾನ?
ಮದ್ವೆ ಅಂದ್ರೆ ಏನು ಅಂದ್ಕೊಂದಿರ? ಒಂದು ಎರಡು ದಿನಕ್ಕೆ ದಬ್ಬೆ ಕಟ್ಟಿಕೊಳ್ಳೋದು ಅಲ್ಲಪ್ಪ. “permanent” ಆಗಿ ದಬ್ಬೆ ಕಟ್ಕೊಬೇಕು. ಆವಾಗ ನೋಡಿ. ಬಾಲ ಹೇಗಿರುತ್ತೆ ಅಂತ.
ನೀವು ನಿತ್ಯಾನಂದ ಸ್ವಾಮಿ ಪ್ರೆಸ್ ಮೀಟ್ ಗೆ ಹೋಗಿ, ಅವರು ಏನ್ ಪ್ರಸಾದ್ ಕೊಟ್ರು ಅಂತ ತಿಳ್ಕೊಂಡೆ ಬರಿಲಿಲ್ವಲ್ಲ? ನೀವು ಎಲ್ಲಿ ಹೋಗಿದ್ರೆ ಪ್ರಸಾದ ಕೊಡೋವಾಗ?
ಹೋಗಿದ್ರೆ ನಿಮಗೂ ಒಂದು ಮುಷ್ಠಿ ಸಿಗ್ತಾ”eclairs ಚಾಕಲೇಟ್”ಇತ್ತಲ್ಲ! ಎಲ್ಲರಿಗೂ ಮುಷ್ಠಿ ಮುಷ್ಠಿ “eclairs ಚಾಕಲೇಟ್” ಕೊಡ್ತಿದ್ದ ಗೊತ್ತ?
hmmm.. 2011 plans chanagive…
Wish u all d best Anna………………………God bless you for ur hard working……………………..
Superb writing Keerthi……I like your writing language, which makes the article more attractive…. Just entered your blog through an article which discloses the reason for leaving Public TV. I read out all the articles of your blog…wonderful ok………
superb words..!