ಅವತ್ತು ನಾನು ಪಬ್ಲಿಕ್ ಟಿವಿಯಲ್ಲಿ ಸಿನಿಮಾ ಬ್ಯೂರೋ ಚೀಫ್ ಆಗಿ ಕೆಲಸ ಮಾಡ್ತಿದ್ದೆ. ಇದ್ದಕ್ಕಿದ್ದ ಹಾಗೆ ಮುನಿರತ್ನ ಸರ್ ಫೋನ್ ಬಂತು. `ಕೀರ್ತಿ, ಮುತ್ತಪ್ಪ ರೈ ಕಂಠೀರವ ಸ್ಟೂಡಿಯೋದಲ್ಲಿ `ಕಠಾರಿವೀರ ಸುರಸುಂದರಾಂಗಿ’ ಸಿನಿಮಾದ ಡಬ್ಬಿಂಗ್ ಮಾಡ್ತಿದ್ದಾರೆ. ಹೋದ್ರೆ ನಿಂಗೆ ಇಂಟರ್ವ್ಯೂ ಕೊಡ್ತಾರೆ’ ಅಂದ್ರು. ಓಕೆ ಅಂದವನೆ ಕಾರ್,ಕ್ಯಾಮರಾ,ಕ್ಯಾಮರಾಮನ್ ಜೊತೆ ಹೊರಟೆ. ಕಂಠೀರವ ಸ್ಟೂಡಿಯೋದಲ್ಲಿ ಹತ್ತಿಪ್ಪತ್ತು ನಿಮಿಷ ಕಾದ ಮೇಲೆ ಮುತ್ತಪ್ಪ ರೈ ದರ್ಶನವಾಯ್ತು. ಮಾತಾಡಿಸಲು ಹೋಗ್ತಿದ್ದಾಗ ಅಲ್ಲಿಗೆ ಒಬ್ಬ ಐದು ಅಡಿ ಒಂಭತ್ತು ಇಂಚು ಎತ್ತರದ, ಸ್ಮಾರ್ಟ್ 26-28 ವರ್ಷದ ಯುವಕ ಬಂದ. ಅವನ ಕೈಯಲ್ಲಿ ಟಿವಿ9 ಲೋಗೋ ಮೈಕ್ ಇತ್ತು. ಅವನ ಬಗ್ಗೆ ಸಾಕಷ್ಟು ಕೇಳಿದ್ದೆ. ಆದ್ರೆ ನೋಡಿದ್ದು ಅದೇ ಮೊದಲು. ಟಿವಿ9 ನಂತಹ ನಂಬರ್ 1 ನ್ಯೂಸ್ ಚ್ಯಾನಲ್ನ ಮೆಟ್ರೋ ಬ್ಯೂರೋ ಚೀಫ್ ಅವನು. ಮುತ್ತಪ್ಪ ರೈ ಮೊದಲು ಇಂಟರ್ವ್ಯೂ ಕೊಟ್ಟಿದ್ದು ಅವನಿಗೇ. ಅದಾದ ಮೇಲೆ ನನ್ನ ಸರದಿ. ಅವನು ರೈ ಮಾತಾಡಿಸಿ ಹೊರಬರುವಾಗ ಆ ಸ್ಪುರದ್ರೂಪಿಗೆ `ಹಲೋ, ಕೀರ್ತಿ ಶಂಕರಘಟ್ಟ, ಪಬ್ಲಿಕ್ ಟಿವಿ’ ಅಂತ ಕೈ ಕೊಟ್ಟೆ. ಅಷ್ಟೇ ವಿನಯದಿಂದ ಪರಿಚಯ ಮಾಡಿಕೊಂಡ.` ಹಾಯ್, ಸೋಮಣ್ಣ ಮಾಚಿಮಡ, ಟಿವಿ9’.
ಅವತ್ತು ನಂಗೆ ಒಂದು ಸಣ್ಣ ಕ್ಲೂ ಸಹ ಇರಲಿಲ್ಲ. ಇದೇ ಸೋಮಣ್ಣ ಮುಂದೊಂದು ದಿನ ನನ್ನ `ಕುಚಿಕು’ ಆಗ್ತಾನೆ ಅಂತ. ನಮ್ಮಿಬ್ಬರ ಸ್ನೇಹದ ವಯಸ್ಸು ತುಂಬಾ ಚಿಕ್ಕದು. ಅದಕ್ಕೆ ಜಾಸ್ತಿ ಏಜ್ ಆಗಿಲ್ಲ. ಆದ್ರೆ ನಾವೊಂಥರಾ ಕ್ಲೋಸು… ಎಕ್ಸ್ಕ್ಯೂಸ್ಮಿ, ಅಪಾರ್ಥಕ್ಕೆ ಅವಕಾಶವಿಲ್ಲ.!
ಅಂದಹಾಗೆ ಅವನಿಗೂ ನಂಗೂ ಜೀವನದಲ್ಲಿ ಸಾಕಷ್ಟು ಸಾಮ್ಯತೆಗಳಿದೆ. ಅವನ ಮದುವೆ 2012ರ ಮೇ30ಕ್ಕೆ, ನನ್ನದು ಅದರ ಮಾರನೇ ದಿನ. ಅವನು ಟಿವಿ9 ಬಿಟ್ಟ ಟೈಮಲ್ಲೇ ನಾನೂ ಪಬ್ಲಿಕ್ ಟಿವಿ ಬಿಟ್ಟೆ..! ಅವನು `ಸತ್ವ’ ಅಂತ ಕಂಪನಿ ಶುರು ಮಾಡಿಕೊಂಡ. ನಾನು `ವಿಸ್ಮಯ’ ಅಂತ ಕಂಪನಿ ಕಟ್ಟಿಕೊಂಡೆ. ಇಬ್ಬರಿಗೂ ಬಿಸನೆಸ್ನ ಸತ್ವ ಹಿಡಿಸಲಿಲ್ಲ. ಅದರಲ್ಲಿ ನಾವಿಬ್ಬರೂ ಅಂತಹ `ವಿಸ್ಮಯ’ವನ್ನೂ ಮಾಡಲಿಲ್ಲ.! ಹಂಗೂ ಹಿಂಗೂ 6-7 ತಿಂಗಳು ತಳ್ಳಿದ ನನಗೆ ಸಮಯ ನ್ಯೂಸ್ ಕೈಬೀಸಿ ಕರೀತು. ನಾನು ಅಲ್ಲಿ ತೂರಿಕೊಂಡ ತಿಂಗಳೊಳಗೆ ಅಲ್ಲಿ ಹಾಜರಾಗಿದ್ದು ಅದೇ ಸೋಮಣ್ಣ ಮಾಚಿಮಡ.
ಸೋಮಣ್ಣ ಮಾಚಿಮಡ ಸಮಯ ನ್ಯೂಸ್ನಲ್ಲೂ ಮೆಟ್ರೋ ಬ್ಯೂರೋ ಚೀಫ್. ಅವನ ಬಗ್ಗೆ ಯಾರು ಏನೇ ಹೇಳಬಹುದು, ಆದ್ರೆ ಅವನು ಮುಗ್ದ ಅಂತ ಗೊತ್ತಾಗೋಕೆ ನನಗೆ ಜಾಸ್ತಿ ದಿನ ಬೇಕಾಗಲಿಲ್ಲ. `ಸೋಮಣ್ಣಂಗೆ ಅಲ್ಲಿ ಸೈಟಿದಿಯಂತೆ, ಇಲ್ಲಿ ಮನೆ ಇದಿಯಂತೆ’ ಅನ್ನೋರಿಗೆ ತಲೆ ಸರಿ ಇಲ್ಲ ಅಷ್ಟೆ. ಅವನು ಅಂತವನಲ್ಲ. ಅವನಿಗೆ ಅಷ್ಟೆಲ್ಲಾ ಸೀನಿಲ್ಲ. ಅವನೊಬ್ಬ ಭಾವನಾಜೀವಿ, ಅವನೊಬ್ಬ ಎಮೋಷನಲ್ ಫೂಲ್, ಅವನೊಬ್ಬ ನಿರುಪದ್ರವಿ, ಅವನೊಬ್ಬ ನಿಜವಾದ ಗೆಳೆಯ… ಅಷ್ಟೆ..!
ಒಂದಂತೂ ಸತ್ಯ, ನನ್ನ ಮನಸಲ್ಲಿ ಸೋಮಣ್ಣ ಮಾಚಿಮಡ ಅಂದ್ರೆ ಏನೇನೋ ಬಿಲ್ಡಪ್ ಇತ್ತು. ಟಿವಿ9 ನಂತಹ ಸಂಸ್ಥೆಯಲ್ಲಿ ಕೆಲಸ ಮಾಡಿದವನು ಅಂದ ಮೇಲೆ ಸ್ವಲ್ಪ ಆಟಿಟ್ಯೂಡ್ ಇದ್ದೇ ಇರುತ್ತೆ ಅನ್ಕೊಂಡಿದ್ದೆ, ಅದು ಸುಳ್ಳಾಯ್ತು. ಯಾವತ್ತೂ ಅವನಿಗೆ ಆಟಿಟ್ಯೂಡ್ ಅಂಟಿಕೊಂಡೇ ಇಲ್ಲ..! ಅವನನ್ನು ನೋಡಿದ್ರೆ ಪಕ್ಕಾ ಫ್ರೊಫೆಶನಲ್ ಲುಕ್. ಅವನು ಮೈಕ್ ಹಿಡಿದ್ರೆ ಸ್ಕ್ರೀನ್ ನುಂಗಿಹಾಕೋ ಅಷ್ಟರ ಮಟ್ಟಿಗೆ ಅವನಿಗೆ ಕ್ಯಾಮರಾ ಫ್ರೆಂಡು. ರಿಪೋರ್ಟಿಂಗ್ ವಿಚಾರದಲ್ಲಿ ಸೋಮಣ್ಣ ಯಾವತ್ತಿಗೂ ಹೀರೋನೆ. ಅಂತಹ ಹೀರೋ ನಂಗೆ ಫ್ರೆಂಡ್ ಆಗ್ತಾನಾ ಅಂತ ಯೋಚ್ನೆ ಮಾಡ್ತಿದ್ದೆ. ಇವತ್ತು ನಾನು ಅವನು ಎಷ್ಟು ಕ್ಲೋಸ್ ಅಂದ್ರೆ, ನಮ್ಮಿಬ್ಬರ ಮಾತುಗಳು ಇವತ್ತು ಹೋಗಲೇ-ಬಾರಲೇ…!
ನಾನು ಯಾರನ್ನಾದ್ರೂ ತುಂಬಾ ಬೇಗ ಅರ್ಥ ಮಾಡ್ಕೋತೀನಿ. ತುಂಬಾ ಬೇಗ ಹತ್ತಿರವಾಗ್ತೀನಿ. ಆದ್ರೆ ಇವನು ನಾನು ಹತ್ತಿರವಾಗಿದ್ದು ಮಾತ್ರ ರೆಕಾರ್ಡ್ ಟೈಮ್ನಲ್ಲಿ. ಮೊದಲ ದಿನ ಹೇಗಿದ್ದೀರಿ..? ಎರಡನೇ ದಿನ ಹೇಗಿದ್ದೀರಿ ಬಾಸ್..? ಮೂರನೇ ದಿನ ಹೇಗಿದಿಯ..? ನಾಲ್ಕನೇ ದಿನ ಹೇಗಿದಿಯಲೇ..?! ಅದಕ್ಕೆ ಅವನೂ ಓಕೆ.. ನಾನೂ ಓಕೆ.. ಅಷ್ಟಕ್ಕೂ ಫ್ರೆಂಡ್ಸ್ ಅಂದ ಮೇಲೆ ಈ ಮರ್ಯಾದೆ ಯಾಕೆ..?
ಒಂದು ವಿಷ್ಯ ತಿಳಿದಿರಲಿ, ಈ ತುಂಬಾ ಭಾವುಕರನ್ನು ಮೇಂಟೇನ್ ಮಾಡೋದು ಸ್ವಲ್ಪ ಕಷ್ಟ. ಸೋಮಣ್ಣಂಗೆ ಒಂದ್ ಹೇಳಿದ್ರೆ ಕಮ್ಮಿ, ಎರಡ್ ಹೇಳಿದ್ರೆ ಜಾಸ್ತಿ..! ಅವನ ಭಾವನಾಜೀವಿಯ ಗುಣವೇ ಅವನ ಬಲ ಮತ್ತು ವೀಕ್ನೆಸ್..! ಎಲ್ಲರನ್ನೂ ನಂಬ್ತಾನೆ, ಎಲ್ಲರೂ ಬೇಕು ಅಂತಾನೆ. ಎಲ್ಲರಲ್ಲಿ ಹಲವರು ಸೋಮಣ್ಣನಿಗೆ ಮರುಭೂಮಿಯಲ್ಲಿ ಜೋಗ್ಫಾಲ್ಸ್ ನೋಡೋಕೆ ಟಿಕೆಟ್ ಕೊಟ್ಟವರೆ..! ಆದರೂ ಅವನು ನಂಬ್ತಾನೆ. ಅವನ ಆ ಮುಗ್ಧತೆ ಅವನನ್ನ ನನಗೆ ಇನ್ನಷ್ಟು ಹತ್ತಿರ ಮಾಡಿಬಿಡ್ತು. 8-9 ವರ್ಷ ಟಿವಿ ಮೀಡಿಯಾದಲ್ಲಿರೋ ಅವನಿಗೆ ಒಂದೇ ಒಂದು ಕನಸು. ` ಆ್ಯಂಕರ್ ಆಗ್ಬೇಕು’ ಅಂತ..! ಆ ಕನಸು ನನಸಾದ ದಿನ ಅವನ ಸಂತೋಷಕ್ಕೆ ಪಾರವೇ ಇಲ್ಲ. ಅಷ್ಟಕ್ಕೂ ಅವನ ಫಸ್ಟ್ ಆ್ಯಂಕರಿಂಗ್ ಎಕ್ಸ್ಪಿರಿಯೆನ್ಸ್ ಅಷ್ಟು ಅದ್ಬುತವೇನಾಗಿರಲಿಲ್ಲ. ಆದ್ರೆ ಬರ್ತಾಬರ್ತಾ ಅವನು ಅದರಲ್ಲಿ ಕಲಿತಿದ್ದಿದಿಯಲ್ಲ ಅದು ಮಾತ್ರ ಗ್ರೇಟ್. ಎಲ್ಲಾ ಚೀಫ್ಗಳಿದ್ದ ಮೀಟಿಂಗ್ನಲ್ಲಿ ಸಮಯ ನ್ಯೂಸ್ ಮಾಲೀಕ ವಿಜಯ್ ಟಾಟಾ ` ಸೋಮಣ್ಣನ ಆ್ಯಂಕರಿಂಗ್ ಸೂಪರ್ರಾಗಿರುತ್ತೆ’ ಅಂತ ಹೊಗಳಿಬಿಟ್ರು. ಅಷ್ಟು ಸಾಕು ಅವನ ಸಂತೋಷಕ್ಕೆ..! ಆ ಕ್ಷಣ ನಾನೂ ಸಹ ಸಖತ್ ಖುಷಿ ಪಟ್ಟಿದ್ದೆ… ಗೆಳೆಯ ಖುಷಿಯಾದ ಅನ್ನೋ ಕಾರಣಕ್ಕೆ.
ಇನ್ನು ನಮ್ಮಿಬ್ಬರ ಕಥೆ… ಹತ್ರತ್ರ ಒಂದೇ ವಯಸ್ಸು ನಮ್ಮಿಬ್ಬರದು. ಸೋ ನನ್ನ ಟೇಸ್ಟು, ಅವನ ಟೇಸ್ಟು ಒಂದೇ ತರ. ನಮ್ಮ ಸಂತೋಷ, ನಮ್ಮ ಬೇಸರ, ನಮ್ಮ ಸ್ಟ್ರೆಂಗ್ತ್-ವೀಕ್ನೆಸ್ ಎಲ್ಲಾ ಸೇಮ್ ಟು ಸೇಮ್. ನಮ್ಮ ಹೈಟು-ವೆಯ್ಟು, ಶರ್ಟು -ಪ್ಯಾಂಟು ಸೈಜು ಎಲ್ಲಾ ಒಂದೆ. ಒಂದೇ ವ್ಯತ್ಯಾಸ ಅಂದ್ರೆ ನಮ್ಮಿಬ್ಬರ ಕಲರ್. ! ಅವನಿಗೆ ನಾನ್ ಬುದ್ಧಿ ಹೇಳೋದು, ಅವನು ನಂಗ್ ಬುದ್ಧಿ ಹೇಳೋದು ದಿನನಿತ್ಯದ ಕೆಲಸ. ಆದ್ರೆ ಬುದ್ಧಿ ಕಲಿತ ಉದಾಹರಣೆ ಖಂಡಿತ ಇಲ್ಲ..!
ಅವನ ವಿಶೇಷತೆ ಏನ್ ಗೊತ್ತಾ..? ಅವತ್ತು ಅವನ ಕಾರ್ ಕಳ್ಕೊಂಡ ದಿನ ಸಹ ಅವನು ಎಂದಿನಂತೆಯೇ ಸಹಜವಾಗೇ ಇದ್ದ. ಅವನಲ್ಲಿ ಕಳವಳ ಇರ್ಲಿಲ್ಲ. ಸಿಗುತ್ತೆ ಅನ್ನೋ ಕಾನ್ಫಿಡೆನ್ಸ್ ಇತ್ತು. `ಕಷ್ಟಪಟ್ಟು ತಗೊಂಡಿದ್ದು ಮಗಾ, ಇನ್ನೂ ಲೋನ್ ಕಟ್ತಾ ಇದ್ದೀನಿ, ಸಿಗುತ್ತಲ್ವಾ ಮಗಾ..?’ ಅಂತ ಮುಗ್ಧವಾಗಿ ಕೇಳುವಾಗ ನಾನು ಬೇಡಿದ್ದಿಷ್ಟೆ. `ದೇವ್ರೆ, ಇವನ ಕಾರ್ ಸಿಗೋ ಹಾಗೆ ಮಾಡಪ್ಪ’ ಅಂತ. ಆ ಕಾರನ್ನು ಅವನ್ಯಾವತ್ತು ಕಾರ್ ತರ ಟ್ರೀಟ್ ಮಾಡೇ ಇಲ್ಲ. ಅದು ಅವನ ಬೆಸ್ಟ್ ಫ್ರೆಂಡ್ ಅಂತಿದ್ದ. ಅದನ್ನ ಎಮೋಶನಲಿ ಮಿಸ್ ಮಾಡ್ಕೋತಿದ್ದ. `ನನ್ ಕಾರ್ ಎಲ್ಲಿರ್ಬೋದೋ ಏನೋ ಅಲ್ವಾ ಮಗಾ, ಅದಕ್ಕೆ ಜೀವ ಇದ್ದಿದ್ರೆ ಅದು ನನ್ ತರಾನೇ ಮಿಸ್ ಮಾಡ್ಕೋತಿತ್ತು ಅಲ್ವಾ ಮಗಾ’ ಅಂತ ಅದೆಷ್ಟೋ ಸಲ ಕೇಳಿದ್ದ ಅವನು. ಆಫೀಸಿಂದ ಮನೆಗೆ ಹೊರಡುವಾಗ ಆಟೋದವರು ಅವನ ಏರಿಯಾಗೆ ಬರಲ್ಲ ಅಂತ ಹೇಳುವಾಗೆಲ್ಲಾ ತನ್ನ ಕಾರನ್ನು ನೆನಪಿಸ್ಕೊಂಡು ಫೀಲ್ ಆಗ್ತಿದ್ದ. ಮಳೆ ಬಂದ್ರೆ ಮತ್ತದೇ ಕಾರು, ಕಾರು, ಕಾರು. ಬೈದಬೈ, ಕಾರ್ ಕಳೆದು ಹೋಗೋ ಹಿಂದಿನ ದಿನ ಅವನ ಕಾರನ್ನ ನಾನ್ ತಗೊಂಡ್ ಹೋಗಿದ್ದೆ. ಕಳೆದು ಹೋಯ್ತು ಅಂತ ಪೊಲೀಸ್ ಸ್ಟೇಶನ್ನಿಗೆ ಕಂಪ್ಲೇಟ್ ಕೊಡೋಕೆ ಹೋದಾಗ, `ಇತ್ತೀಚೆಗೆ ನಿಮ್ಮ ಕಾರನ್ನ ಯಾರ್ಯಾರ್ ತಗೊಂಡ್ ಹೋಗಿದ್ರೋ ಅವರ ಡಿಟೇಲ್ಸ್ ಕೊಡಿ ಅಂತ ಪೊಲೀಸರು ಕೇಳಿದ್ರು’. ಅವತ್ತು ಸಹ ನನ್ನ ಹೆಸರನ್ನು ಪೊಲೀಸರಿಗೆ ಕೊಡದೇ ಬಂದಿದ್ದ ನನ್ನ ಗೆಳೆಯ. ಕೊನೆಗೊಂದು ದಿನ ಆ ಕಾರು ಸಿಕ್ಕಿಬಿಡ್ತು. ಆ ಕಳ್ಳ ಒಟ್ಟು 34 ಕಾರ್ ಕದ್ದಿದ್ದ. ಅವನು ಕದ್ದ ಕೊನೆಯ ಕಾರು ನನ್ನ ಗೆಳೆಯನದ್ದು. ಈಗವನು ಪೊಲೀಸರ ಅತಿಥಿ. ಆ ಕಾರು ವಾಪಸ್ ಸಿಕ್ಕಿದ್ದು ನಮ್ಮ ಪ್ರಾರ್ಥನೆಗಲ್ಲ, ಸೋಮಣ್ಣನ ಒಳ್ಳೇತನಕ್ಕೆ..! ತನ್ನ ಕಾರು ಕದ್ದವನನ್ನು ಮಾತನಾಡಿಸಿ ಅವನಿಗೆ ಖರ್ಚಿಗೆ ದುಡ್ಡು ಕೊಟ್ಟು ಬಂದ ಮಹಾನುಭಾವ ಇವನು..!
ಸೋಮಣ್ಣನಲ್ಲಿ ಇಷ್ಟವಾಗೋ ಹತ್ತಾರು ಗುಣಗಳಿವೆ. ಅವನ್ಯಾವತ್ತೂ ಯಾರ ಮೇಲೂ ಅವನಾಗೇ ಕಾಲು ಕೆರ್ಕೊಂಡು ಜಗಳಕ್ಕೆ ಹೋಗೋನಲ್ಲ. `ಅವತ್ತು ಆಫೀಸ್ನಲ್ಲಿ ಇನ್ಪುಟ್ ಚೀಫ್ ಶೋಭಾ ಮೇಡಂ ಜೊತೆ ಜೋರುಜೋರಾಗಿ ಕೆಲಸದ ವಿಚಾರಕ್ಕೆ ಜಗಳ ಆಡಿದ್ದ ಸೋಮಣ್ಣ, ಅದೇ ಶೋಭಾ ಮೇಡಂ ಕೆಲಸ ಬಿಟ್ಟ ದಿನ `ಯಾಕ್ ಮಗಾ ಬಿಟ್ರು. ತುಂಬಾ ಒಳ್ಳೆಯವ್ರು ಮಗಾ. ಅವರಿಗೆ ನನ್ ಮೇಲೇನೂ ಬೇಜಾರಿರಲ್ಲ ಅಲ್ವಾ’ ಅಂತ ನೊಂದುಕೊಂಡಿದ್ದ. ಅದಕ್ಕೇ ಅವನು ಎಲ್ಲರಿಗೂ ಇಷ್ಟ ಆಗೋದು. ಅವನು ಮಾಡದ ತಪ್ಪನ್ನು ಅವನು ಸುತಾರಾಂ ಒಪ್ಪಿಕೊಳ್ಳೋನೂ ಅಲ್ಲ. ಅದೊಂಥರಾ ವಿಚಿತ್ರ ಪ್ರಾಣಿ. ಯಾವಗ್ಲೂ `ಹಂಗ್ ಮಾಡ್ಬೇಕ್ ಮಗಾ, ಹಿಂಗ್ ಮಾಡ್ಬೇಕ್ ಮಗಾ… ನೀನು, ನಾನು ಎಲ್ರೂ ಬೆಳೀಬೇಕು ಮಗಾ..!’ ಇದೇ ಅವನ ಮಂತ್ರ. `ನಾನು ಮಾತ್ರ ಉದ್ಧಾರ ಆಗ್ಬೇಕು ಅನ್ನೋ ಪ್ರಪಂಚದಲ್ಲಿ ಎಲ್ಲರೂ ಬೆಳೀಬೇಕು ಅನ್ನೋ ನಿಷ್ಕಲ್ಮಶ ಮನಸ್ಸಿನವನು ನನ್ನ ಗೆಳೆಯ ಸೋಮಣ್ಣ ಮಾಚಿಮಡ. `ಮಗಾ, ನಿನ್ ತರ ಬರೆಯೋಕ್ ಬಂದಿದ್ರೆ ಮಿನಿಮಮ್ 10 ಬುಕ್ಸ್ ಬರ್ದಿರ್ತಿದ್ದೆ ಅಂತ ನಂಗೆ ಹುಚ್ಚು ಹತ್ತಿಸಿದವನೂ ಇವನೇ..!
ನಾವು ಒಟ್ಟಿಗೆ ಊಟಕ್ಕೆ ಹೋಗ್ತೀವಿ, ಒಟ್ಟಿಗೇ ಕೂತು ಗಂಟೆಗಟ್ಲೆ ಮಾತಾಡ್ತೀವಿ, ಅವನ ಕಂಪನಿಯನ್ನ ನನ್ನ ಫೇಸ್ಬುಕ್ ಪ್ರೊಫೈಲ್ನಲ್ಲಿ, ನನ್ನ ಕಂಪನಿಯನ್ನ ಅವನ ಫೇಸ್ಬುಕ್ ಪ್ರೊಫೈಲ್ನಲ್ಲಿ ಪ್ರಮೋಟ್ ಮಾಡ್ಕೋತೀವಿ. ಪರಸ್ಪರ ಬೆನ್ನು ತಟ್ಕೋತೀವಿ. ಪರಸ್ಪರ ಕಿತ್ತಾಡ್ಕೋತೀವಿ. ಅವನ ಪುಮಾ ಜ್ಯಾಕೆಟ್ ನನ್ ಹತ್ರ ಇದೆ. ನನ್ನ ನೈಕ್ ಅವನ ಮೈಮೇಲಿದೆ. ನಮ್ಮಬ್ಬರಲ್ಲಿ ನನ್ನದು ಅವನದು ಅಂತಿಲ್ಲ. ತುಂಬಾ ಕಮ್ಮಿ ಟೈಮಲ್ಲಿ ತುಂಬಾ ಹತ್ತಿರವಾಗಿದೀವಿ. ಇನ್ಯಾವತ್ತಿಗೂ ದೂರ ಆಗಲ್ಲ ಅಂತ ಅನ್ಕೊಂಡಿದೀವಿ. ನನ್ನ ಮಾತುಗಳನ್ನು ತುಂಬಾ ಎಂಜಾಯ್ ಮಾಡೋರಲ್ಲಿ ಸೋಮಣ್ಣನೂ ಒಬ್ಬ. ಮುಂದೊಂದು ದಿನ ನಾವಿಬ್ಬರೂ ವಾಕಿಂಗ್ ಸ್ಟಿಕ್ ಹಿಡ್ಕೊಂಡು ಓಡಾಡೋ ಟೈಮಲ್ಲಿ, ನನ್ನ ಮಾತನ್ನು ಅವತ್ತಿನ ನಮ್ಮ ಏರಿಯಾದ ಪಾರ್ಕಿನ ಕಟ್ಟೆ ಮೇಲೆ ಕೂತು ಅವನು ಎಂಜಾಯ್ ಮಾಡ್ಬೇಕು ಅನ್ನೊದು ನನ್ನಾಸೆ. ಅವನದೂ ಕೂಡ..! ಗೆಳೆಯಾ… ಇರೋ ತನಕ ಜೊತೆಗಿರೋಣ…
ನಾನವನಿಗೆ ಅವತ್ತೊಂದು ದಿನ ವಾಟ್ಸಾಪ್ನಲ್ಲಿ ಒಂದು ಮೆಸೇಜ್ ಕಳಿಸಿದ್ದೆ. ಅದನ್ನ ಹೇಳಿ ನನ್ನ ಕುಚಿಕು ಬಗ್ಗೆ ಮಾತು ಮುಗಿಸ್ತೀನಿ…
`ನೀ ನನಗಲ್ಲ ಬರಿಯ ಗೆಳೆಯ… ನೀ ನನಗಲ್ಲ ಬರಿಯ ಗೆಳೆಯ…
ನನಗೇನಾದರೂ ನಿನ್ನ ವಯಸ್ಸಿನ ಮಗಳಿದ್ದಿದ್ದರೆ ನೀನೇ ನನ್ನಳಿಯ..!
ಮೀಟ್ ಮಿಸ್ಟರ್ ಸೋಮಣ್ಣ ಮಾಚಿಮಡ…
ಆಗಷ್ಟ್ 2, 2014 keerthishankaraghatta ಮೂಲಕ
ನೈಸ್ ತುಂಬಾ ಖುಷಿ ಆಯಿತು ನಿಮ್ಮಿಬ್ಬರ ಗೆಳೆತನ ಓದಿ, ಟಿವಿ ಮಾಧ್ಯಮಗಳಲ್ಲಿ ಯಾರಾದ್ರೂ ಇಬ್ರೂ ಯಂಗ್ ಗೆಳೆಯರಿದ್ರೆ ಅವರು ನೀವಿಬ್ರೂ, ನಾನು ಸೋಮಣ್ಣ ರವರನ್ನೂ ಮೊದಲ ಭೇಟಿ ಮಾಡಿದ್ದು ನಮ್ಮ ಈಕವಿ ಪತ್ರಿಕೆ ಸಭೆಯಲ್ಲಿ, ಆಗಲೇ ಮನಸ್ಸಿಗೆ ಬಂದಿತ್ತು ಇವರು ಮುಂದೆ ಒಂದು ದಿನ ಉನ್ನತ ಮಟ್ಟಕ್ಕೆ ಹೋಗುತ್ತಾರೆ ಅಂತ, ನಿಮ್ಮಿಬ್ಬರಿಗೂ ಶುಭಾಶಯಗಳು , ಇಬ್ರಿಗೂ ಒಳ್ಳೆಯದು ಅಗಲಿ ವಿತ್ ಲವ್ ನಿಮ್ಮ ನಂದಿ ಜೆ. ಹೂವಿನಹೊಳೆ
olleya nirupane keerthi all the best
I have been following Tv9 since when it started.I have been following all the Anchors, reporters and correspondents.Sommanna is a very unique among all of them, Sommanna has a professional attitude, as you said he himself is a star.He has done many interviews with many personalities. i remember in of the Air Shows held in Bangalore,Tv9 gave its best report as Sommanna who was part of the event. Keerthi bhai your writing is really awesome. I wish your friendship will remain for ever All the best. Grow Professionally and Live Happily
super kirik keerti……………………. nim friendship yavagle hige chiraruni yagirali
nijvaglu nimmibra fiendship thumba chennagide kelavarige mathra intha olle friends sigodu sikka friends na yavudo karanakke miss madkollo chance thumbane adre nimmibara sneha old age na varegu yochane madidiri andre edu kanditha shashwatha sneha no more comments yavude karanakku miss madkobedi. nanu modalinindalu kirthi yavaranna fallow madtha bandidini neevu mado activities nimma ondu yochane ella agora vismaya. really proud of u kirthi……..Raghav aldur
like maado option ilwa….. registration keltide…. but still olle article. avnu haage ondthara ishta aagtane ond thara kopa barustaane…..
e-prapanchadalli-e kuchuku josti.virala…i love both brother..
Avanu ellarthara alla… Bari freinds mathra alla familylu ashte ellara melu avnige preethi … Obbru kashta annbardu ellaru chennagirbrku annode avana palina asthi.devru olled madli avanige…
Super keerthi. I like it. Pls keep it up. We r waiting next segments..
ನಿಮ್ಮಿಬ್ಬರ ಸ್ನೇಹ ನೂರು ಕಾಲ ಬಾಳಲಿ…
anda haage somanna tanna caru kaddavanige kharchige kotta duddu nandu…. avattu purse alli iddadde 100rs. adnu somanna tagond car kallanige kotbitta punyatma…. ava emotional jeevi annodu satya..
Thank You So Much Keerthi…!